ಬೆಳ್ತಂಗಡಿ ಹಲವು ಮಂದಿ ಕಾಂಗ್ರೆಸ್ ಬೆಂಬಲಿಗರು ಬಿಜೆಪಿ ಸೇರ್ಪಡೆ: ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಹರೀಶ್ ಪೂಂಜ:

 

 

ಬೆಳ್ತಂಗಡಿ : ಕಾಂಗ್ರೆಸ್ ಬೆಂಬಲಿಗರಾಗಿದ್ದ ಕಳೆಂಜ ಗ್ರಾಮದ ಜೋಜಿ ಮತ್ತು ಗಂಡಿಬಾಗಿಲಿನ ಅಜಿತ್ ಪಿ.ಎಮ್. ಅವರು ಎ.24ರಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಬೆಳ್ತಂಗಡಿಯ ಹಳೆಕೋಟೆಯಲ್ಲಿರುವ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಶಾಸಕ ಹರೀಶ್ ಪೂಂಜ ಅವರು ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.

 

 

 

ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾದ ಪಿ.ಸಿ. ಸೆಬಾಸ್ಟಿನ್, ಪ್ರಮುಖರಾದ ಅಜೇಯ್ ಮಟ್ಲ, ಜೈಸನ್ ಕಳೆಂಜ, ಸಾಬು ಕಕ್ಕಿಂಜೆ ಅವರು ಉಪಸ್ಥಿತರಿದ್ದರು.

error: Content is protected !!