ಬೆಳ್ತಂಗಡಿ: ತುಳುನಾಡಿನ ಯೋಧ ಸುಬೇದಾರ್ ಏಕನಾಥ ಶೆಟ್ಟಿ ಅವರಿಗೆ ಇಂದು (ಏ.05) ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿ ಲಭಿಸಿದೆ.
ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ (ರಿ) ಮಂಗಳೂರು ವತಿಯಿಂದ ಈ ವರ್ಷದಿಂದ ಕೊಡಮಾಡುವ ಶೌರ್ಯ ಪ್ರಶಸ್ತಿಯನ್ನು ಮೊಟ್ಟಮೊದಲಿಗೆ ಭಾರತದ ದೇಶದ ಹೆಮ್ಮೆಯ ಸೈನಿಕ, ಭೂ ಸೇನೆಯ ನಿವೃತ್ತ ಯೋಧ, 2016ರಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಇನ್ನೂ ಪತ್ತೆಯಾಗದ ವಿಮಾನದಲ್ಲಿದ್ದ ಸುಬೇದಾರ್ ಏಕನಾಥ ಶೆಟ್ಟಿ ಅವರಿಗೆ ನೀಡಲಾಗಿದ್ದು ಲೊಯಲ್ಲಾ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರ ಪತ್ನಿ ಜಯಂತಿ, ಮಗಳು ಆಶಿತಾ, ಮಗ ಅಕ್ಷಯ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶಾಖಾ ಮಠ ಮಂಗಳೂರಿನ ಡಾ.ಧರ್ಮಪಾಲನಾಥ ಸ್ವಾಮೀಜಿ, ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ, ವಿಗಾರ್ ಜನರಲ್ ಮಂಗಳೂರು ಧರ್ಮ ಪ್ರಾಂತ್ಯದ ಮ್ಯಾಕ್ಸಿಮ್ ನೊರೊನ್ಹಾ, ಮುಸ್ಲೀಂ ಧರ್ಮಗುರು ಯು ಕೆ ಅಬ್ದುಲ್ ಅಜೀಜ್ ಧಾರಿಮೀ ಉಪಸ್ಥಿತರಿದ್ದರು.