ಬೆಳ್ತಂಗಡಿ: ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಎ.03 ರಿಂದ 07ರವರೆಗೆ ನಡೆಯಲಿದ್ದು ಇಂದು (ಎ.04) ಲಾಯಿಲ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ವೆಂಕಟರಮಣ ದೇವಸ್ಥಾನದ ಸುಧೇಶ್ ಕಾಮತ್ ದೀಪ ಬೆಳಗಿ ಉದ್ಘಾಟಿಸಿದರು. ಶ್ರೀ ಮೋಹನದಾಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರು ಮೆರವಣಿಗೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬಳಿಕ ವಿವಿಧ ನೃತ್ಯ ಭಜನಾ ತಂಡಗಳ ಮೂಲಕ ದೇವಸ್ಥಾನದ ವಠಾರದಿಂದ ಶ್ರೀ ಕ್ಷೇತ್ರದವರೆಗೆ ವೈಭವದಿಂದ ಹಸಿರುವಾಣಿ ಹೊರೆಕಾಣಿಕೆ ಹಾಗೂ ನೂತನ ಗಣಪತಿ ವಿಗ್ರಹ ಹಾಗೂ ಶ್ರೀ ನಾರಾಯಣ ಗುರುಗಳ ಪೀಠದ ಮೆರವಣಿಗೆ ಸಾಗಿತು.
ಕ್ಷೇತ್ರದಲ್ಲಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿ ಇದರ ಅಧ್ಯಕ್ಷರಾದ ಕೆ.ಎಸ್ ಯೋಗೀಶ್ ಕುಮಾರ ಉಗ್ರಾಣ ಉದ್ಘಾಟಿಸಿದರು. ಬಳಿಕ ಕಾರ್ಯಾಲಯವನ್ನು ನಾರಾಯಣ ಸುವರ್ಣ ಮಂಜನೊಟ್ಟು ಬೆಳಾಲು ಇವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ.ಎಂ ದಯಾಕರ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ದಯಾನಂದ ಲಾಯಿಲ, ಪ್ರಧಾನ ಕಾರ್ಯದರ್ಶಿ ರಾಜೀವ ಸಾಲಿಯಾನ್, ಕೋಶಾಧಿಕಾರಿ ಸಂದೀಪ್, ದೇವಸ್ಥಾನದ ಧರ್ಮದರ್ಶಿ ಯೋಗೀಶ್ ಪೂಜಾರಿ,ಪ್ರಧಾನ ಅರ್ಚಕ ಯಶವಂತ ಶಾಂತಿ, ಕೋಶಾಧಿಕಾರಿ ಪ್ರಶಾಂತ್ ಕುದ್ಯಾಡಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ, ಬರಮೇಲು, ಅಧ್ಯಕ್ಷ ಸುರೇಶ್ ಶೆಟ್ಟಿ ಮಾಪಲಾಡಿ , ಪ್ರಧಾನ ಕಾರ್ಯದರ್ಶಿ ಮೋಹನ್ ಬಟ್ಯರಡ್ಡ, ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಬಂಗೇರ ಅಂಕಾಜೆ, ಭಜನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಮಾಪಲಾಡಿ, ಸೇರಿದಂತೆ ವಿವಿಧ ಸಮಿತಿಯ ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
ಇಂದು ಸಂಜೆ 5ರಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶ್ರೀ ಕ್ಷೇತ್ರ ನಾಳ ಇವರಿಂದ ನಡೆಯುವ ಭಜನಾ ಕಾರ್ಯಕ್ರಮವನ್ನು ರವೀಂದ್ರನಾಥ ಜಿ. ಗುಂಪೋಳಿ ಉದ್ಘಾಟಿಸಲಿದ್ದಾರೆ. ಬಳಿಕ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ.
ರಾತ್ರಿ 7ರಿಂದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಉದ್ಘಾಟಿಸಲಿದ್ದಾರೆ. ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಂ ನಿತ್ಯಾನಂದ ನಗರ ಧರ್ಮಸ್ಥಳದ ಮಠಾಧೀಶರಾದ ಸದ್ಗುರು ಶ್ರೀಶ್ರೀಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ವಸಂತ ಸಾಲ್ಯಾನ್, ಪ್ರಾದೇಶಿಕ ನಿರ್ದೇಶಕರು, ಎಸ್.ಕೆ.ಡಿ.ಆರ್.ಡಿ.ಪಿ., ಉಡುಪಿ, ಸತೀಶ್ ಶೆಟ್ಟಿ, ನಿರ್ದೇಶಕರು, ಎಸ್.ಕೆ.ಡಿ.ಆರ್.ಡಿ.ಪಿ., ದ.ಕ.ಜಿಲ್ಲೆ, ಭಗೀರಥ ಜಿ., ನ್ಯಾಯವಾದಿಗಳು, ನೋಟರಿ, ಬೆಳ್ತಂಗಡಿ, ಡಾ| ಸತೀಶ್ ಶೆಟ್ಟಿ, ಶ್ರೀ ತುಂಗಾ ಆಸ್ಪತ್ರೆ, ಮುಂಬಯಿ, ಶೈಲೇಶ್ ಕುಮಾರ್ ಕುರ್ತೋಡಿ, ಮಾಜಿ ಸದಸ್ಯರು, ದ.ಕ. ಜಿಲ್ಲಾ ಪಂಚಾಯತು, ರಾಜೀವ, ಆಡಳಿತ ಮೊಕ್ಕೇಸರರು, ಶ್ರೀ ನಾಗಕಲ್ಲುರ್ಟಿ ಕ್ಷೇತ್ರ ಮಂಗಳಗಿರಿ, ಮುಂಡೂರು, ಜಯಂತ ಪೂಜಾರಿ, ಉದ್ಯಮಿ, ಬೆಂಗಳೂರು, ತ್ಯಾಗರಾಜ್, ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ, ಹರಿಣಾಕ್ಷಿ, ಅಧ್ಯಕ್ಷರು, ಗ್ರಾ. ಪಂ. ಮೇಲಂತಬೆಟ್ಟು, ಪ್ರಮೋದ್ ಶೆಟ್ಟಿ ನಾಸಿಕ್, ಮುಂಬಯಿ, ಸುರೇಶ್ ಶೆಟ್ಟಿ ನಾಸಿಕ್, ಮುಂಬಯಿ, ಕಿಶೋರ್ ಕುಮಾರ್, ಕುರ್ತೊಡಿ, ಶ್ರೀ ನಾಗಬ್ರಹ್ಮ ದೇವಸ್ಥಾನ, ಮೇಲಂತಬೆಟ್ಟು, ನಿರ್ಮಲ್ ಕುಮಾರ್, ಕಾರ್ಯದರ್ಶಿ, ಗ್ರಾ.ಪಂ., ಮೇಲಂತಬೆಟ್ಟು ಭಾಗವಹಿಸಲಿದ್ದಾರೆ.