ಉರಗ ಪ್ರೇಮಿ ಲಾಯಿಲ ಸ್ನೇಕ್ ಅಶೋಕ್‌ ಗೆ ಹಾವು ಕಡಿತ: ಮಂಗಳೂರು ಆಸ್ಪತ್ರೆಗೆ ದಾಖಲು, ಅಪಾಯದಿಂದ ಪಾರು:

 

 

 

ಬೆಳ್ತಂಗಡಿ : ನಾಗರ ಹಾವನ್ನು ರಕ್ಷಣೆ ಮಾಡುವ ವೇಳೆ ಲಾಯಿಲ ಸ್ನೇಕ್ ಅಶೋಕ್ ಅವರಿಗೆ ಆಕಸ್ಮಿಕವಾಗಿ ಹಾವು ಕಚ್ಚಿದ ಘಟನೆ ಮಾ 25 ರಂದು ರಾತ್ರಿ ನಡೆದಿದೆ.

ರಾತ್ರಿ 10 ಗಂಟೆಗೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮನೆಯಲ್ಲಿ ನಾಗರ ಹಾವು ಇರುವ ಬಗ್ಗೆ ಮಾಹಿತಿ ಬಂದಿದ್ದು ಅದರಂತೆ ರಕ್ಷಣೆ ಮಾಡಲು ಲಾಯಿಲ ಸ್ನೇಕ್ ಅಶೋಕ್ ತೆರಳಿ ಹಾವು ಹಿಡಿಯುವ ಸಂದರ್ಭ ಆಕಸ್ಮಿಕವಾಗಿ ನಾಗರ ಹಾವು ಬಲ ಕಾಲಿಗೆ ಕಚ್ಚಿದೆ ಎನ್ನಲಾಗಿದೆ. ತಕ್ಷಣ ಅವರು ಉಜಿರೆ ಖಾಸಗಿ ಆಸ್ಪತ್ರೆಗೆ ಬಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮಂಗಳೂರು ಆಸ್ಪತ್ರೆಗೆ ರವಾನಿಸಲು ಸೂಚಿಸಿದ್ದಾರೆ. ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಬಾ ಅಂಬುಲೆನ್ಸ್ ಚಾಲಕ ಜಲೀಲ್ ಮತ್ತು ಪ್ರತೀಕ್ ಕೋಟ್ಯಾನ್ ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ . ಸ್ನೇಕ್ ಅಶೋಕ್ ಅಪಾಯದಿಂದ ಪಾರಾಗಿದ್ದು ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ . ಅವರಿಗೆ ಈ ಮೊದಲು ನಾಗರ ಹಾವು ಕಚ್ಚಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪ್ರಸಿದ್ಧ ಹಾವು ರಕ್ಷಕರಲ್ಲಿ ಸ್ನೇಕ್ ಅಶೋಕ್ ಲಾಯಿಲ ಕೂಡ ಒಬ್ಬರಾಗಿದ್ದಾರೆ.

error: Content is protected !!