ಬೆಳ್ತಂಗಡಿ : ನಾರ್ಮಲ್ ಡೆಲಿವರಿ ಆಗುವುದಿದ್ದರೂ ಹಣದ ಆಸೆಗಾಗಿ ಹಲವಾರೂ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ತಾಯಿಯ ಗರ್ಭದಿಂದ ಮಗುವನ್ನು ಹೊರತೆಗೆಯುವ ಈ ಕಾಲದಲ್ಲೂ ಬೆನಕ ಆಸ್ಪತ್ರೆಯ ವೈದ್ಯರು ತಮ್ಮ ಚಾಣಾಕ್ಷತನದಿಂದ ಹಾಗೂ ಧೈರ್ಯದಿಂದ ತಾಯಿಗೆ ಸಹಜ ಹೆರಿಗೆ ಮಾಡಿಸಿ ತಮ್ಮ ಸಂಸ್ಥೆಯ ಹೆಸರನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸತತ 16 ಗಂಟೆಗಳ ಪ್ರಯತ್ನದಿಂದ ವೈದ್ಯರಾದ ಅಂಕಿತ ಜಿ. ಭಟ್ ಅವರು ತಾಯಿಗೆ ಸಹಜ ಹೆರಿಗೆ ಮಾಡಿಸಿದ್ದಾರೆ, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಜನನವಾದ ಮಗು 4.5 ಕೆ.ಜಿ ತೂಕವಿತ್ತು. ಮಗುವಿನ ತಾಯಿ ಬೆನಕ ಆಸ್ಪತ್ರೆಯ ಸಿಬ್ಬಂದಿ ಕೂಡ ಹೌದು. ತಾಯಿಯ ಸಹಜ ಹೆರಿಗೆಯಿಂದ ಮನೆಮಂದಿ ಹಾಗೂ ಕುಟುಂಬಸ್ಥರು ಸಂತಸಗೊಂಡಿದ್ದಾರೆ.
ಫೆ.27 ರಂದು ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ 1.6 ಕೆ.ಜಿ ಗೆಡ್ಡೆಯನ್ನು ಸತತ 3 ಗಂಟೆಗಳ ಪ್ರಯತ್ನದಿಂದ ಡಾ.ಅಂಕಿತಾ.ಜಿ.ಭಟ್ ಅವರು ಕೀ ರಂದ್ರ ಚಿಕಿತ್ಸೆ ಮೂಲಕ ಹೊರತೆಗದಿದ್ದರು.