ಸುದ್ದಿ ಉದಯ ” ವಾರ ಪತ್ರಿಕೆ ಕಚೇರಿ ಉದ್ಘಾಟನೆ: ನಕ್ಷತ್ರದಂತೆ ಪತ್ರಿಕೆ ಬೆಳಗಲಿ: ಶರತ್ ಕೃಷ್ಣ ಪಡುವೆಟ್ನಾಯ: ಹಲವಾರು ಗಣ್ಯರಿಂದ ನೂತನ ಪತ್ರಿಕೆಗೆ ಶುಭ ಹಾರೈಕೆ:

 

 

ಬೆಳ್ತಂಗಡಿ: ಹೊಸ ನಕ್ಷತ್ರವೊಂದು ಸುದ್ಧಿ ಉದಯ ವಾರ ಪತ್ರಿಕೆಯ ಮೂಲಕ ಬೆಳ್ತಂಗಡಿಯಲ್ಲಿ ಪ್ರಾರಂಭವಾಗಿದೆ. ತಾಲೂಕಿನ ಎಲ್ಲಾ ಬೆಳವಣಿಗೆಗಳನ್ನು ಮೂಲೆ ಮೂಲೆಗೂ ಹಬ್ಬಿಸುವ ಕೆಲಸ ಈ ಪತ್ರಿಕೆಯಿಂದಾಗಲಿ. ನಕ್ಷತ್ರದಂತೆ ಈ ಪತ್ರಿಕೆಯು ಬೆಳಗಲಿ ಎಂದು ಉಜಿರೆ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.ಅವರು ಬೆಳ್ತಂಗಡಿ ರಕ್ಷಾ ಆರ್ಕೆಡ್ ನಲ್ಲಿ ಮಾ 22 ರಂದು ನೂತನವಾಗಿ ಆರಂಭಗೊಂಡ “ಸುದ್ಧಿ ಉದಯ” ವಾರ ಪತ್ರಿಕೆಯ ಕಚೇರಿಯನ್ನು ದೀಪ ಬೆಳಗಿಸಿ  ಉದ್ಘಾಟಿಸಿ  ಶುಭ ಹಾರೈಸಿದರು.ಲೋಗೋ ಬಿಡುಗಡೆ ಗೊಳಿಸಿ ಶಾಸಕ ಹರೀಶ್ ಪೂಂಜ ಮಾತನಾಡಿ ನವ ಬೆಳ್ತಂಗಡಿ ಗೆ ಸುದ್ಧಿ ಉದಯ ಪತ್ರಿಕೆ ಗರಿಯಾಗಿ ಮೂಡಿ ಬರಲಿ ತಾಲೂಕಿನ ಪ್ರತಿಯೊಬ್ಬರು ಈ ಪತ್ರಿಕೆಯನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಮೂಲಕ ಎತ್ತರಕ್ಕೆ ಬೆಳೆಸುವ ಕೆಲಸವನ್ನು ಬೆಳ್ತಂಗಡಿ ಜನತೆ ಮಾಡಬೇಕು ಎಂದರು.

ನಿಷ್ಷಕ್ಷ ಹಾಗೂ ನೈಜ ವರದಿಗಳನ್ನು ಪ್ರಕಟಿಸುವ ಮೂಲಕ ಸಮಾಜದಲ್ಲಿ ಮಾದರಿ ಪತ್ರಿಕೆಯಾಗಿ ಸುದ್ಧಿ ಉದಯ ಮೂಡಿ ಬರಲಿ ಎಂದು ವೆಬ್ ಸೈಟ್ ಗೆ ಚಾಲನೆ ನೀಡಿ ಮಾಜಿ ಶಾಸಕ ವಸಂತ ಬಂಗೇರ ಶುಭ ಹಾರೈಸಿದರು. ಎಸ್. ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಸುರ್ಯಗುತ್ತು ಕಚೇರಿ ಉದ್ಘಾಟಿಸಿ
ಬದಲಾವಣೆ ಮತ್ತು ಬೆಳವಣಿಗೆ ಜಗದ ನಿಯಮ ಶಾಸಕಾಂಗ .ನ್ಯಾಯಾಂಗ,ಕಾರ್ಯಾಂಗ ಇದು ಸಮರ್ಪಕವಾಗಿ ಮುನ್ನಡೆಯಲು ಪತ್ರಿಕಾರಂಗ ಪ್ರಮುಖವಾಗಿರುತ್ತದೆ ಎಂದರು..ಕಂಪ್ಯೂಟರ್ ಕೊಠಡಿ ಉದ್ಘಾಟನೆಯನ್ನು ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್, ಮಾಜಿ ಸಚಿವ ಗಂಗಾಧರ್ ಗೌಡ ಯೂಟ್ಯೂಬ್ ಚಾನಲ್ ಗೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ
ಮಾಜಿ ಶಾಸಕ ಪ್ರಭಾಕರ ಬಂಗೇರ, ದ.ಕ ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ರಕ್ಷಾ ಆರ್ಕೇಡ್ ಮಾಲಕ ರಾಘ್ನೇಶ್ ,ತಾಲೂಕು ಮುಸ್ಲಿಂ ಒಕ್ಕೂಟ ಅಧ್ಯಕ್ಷ ಬಿ.ಎ. ನಝೀರ್,
ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹೆಚ್. ಪದ್ಮಗೌಡ, ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬೆಳ್ತಂಗಡಿ ಪತ್ರಕರ್ತರ ಸಂಘ ಅಧ್ಯಕ್ಷ ಹೃಷಿಕೇಶ್ , ಮೀಡಿಯ ಕ್ಲಬ್ ಅಧ್ಯಕ್ಷ ಸತೀಶ್ ಪೆರ್ಲೆ, ಮೂಲ್ಯರ ಯಾನೆ ಕುಲಾಲರ ಸಂಘ ಅಧ್ಯಕ್ಷ ಹರೀಶ್ ಕಾರಿಂಜ, ಮಹಿಳಾ ವೃಂದ ಅಧ್ಯಕ್ಷೆ ಶ್ರೀಮತಿ ಆಶಾ ಸತೀಶ್, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಲಿಂಗಪ್ಪ ನಾಯ್ಕ, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಚಂದ್ರಹಾಸ ಬಳೆಂಜ ನಿರೂಪಿಸಿ ಉಪ ಸಂಪಾದಕ ಸಂತೋಷ್ ಪಿ. ಕೋಟ್ಯಾನ್, ಸ್ವಾಗತಿಸಿದರು.ಮಾಲಕರಾದ ತುಕರಾಮ್, ಪ್ರಧಾನ ಸಂಪಾದಕರಾದ ಬಿ. ಎಸ್.‌ಕುಲಾಲ್, ವ್ಯವಸ್ಥಾಪಕರಾದ ತಿಮ್ಮಪ್ಪ ಗೌಡ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಗೌಡ ಹೊಸ ಪಟ್ನ ಹಾಗೂ ಸಿಬ್ಬಂದಿಗಳು ಬಂದ ಆತಿಥಿಗಳನ್ನು ಆತ್ಮೀಯವಾಗಿ  ಸ್ವಾಗತಿಸಿ ಬರಮಾಡಿಕೊಂಡರು.

error: Content is protected !!