ಬೆಳ್ತಂಗಡಿ: ಶ್ರೀ ಮನೋಜ್ ಕಟ್ಟೆಮಾರ್ ಧರ್ಮದರ್ಶಿಗಳು ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರ್ ಇವರ ಶುಭ ಆಶೀರ್ವಾದ ಮತ್ತು ದಿವ್ಯ ಉಪಸ್ಥಿತಿಯಲ್ಲಿ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ – ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಿಗಾಗಿ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಮಾ.25ರಂದು ಸಂಜೆ 7ರಿಂದ ‘ಸಾನಿಧ್ಯ ಉತ್ಸವ’ ನಡೆಯಲಿದೆ ಎಂದು ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
536ನೇಯ ಸಾಂಸ್ಕೃತಿಕ ಸೇವಾ ಯೋಜನೆಯು ಶ್ರೀ ಗಣೇಶ ಸೇವಾ ಟ್ರಸ್ಟಿನ ಸೇವಾ ಘಟಕ ಪ್ರಾಥಮಿಕ ಆರೋಗ್ಯ ಕೇಂದ್ರದ ಐಟಿ, ಉಜಿರೆ ಬೆಳ್ತಂಗಡಿ, ದ.ಕ ಹಾಗೂ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ.) ದ.ಕ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ನಡೆಯಲಿದ್ದು ವಿಶೇಷವಾಗಿ ಎಂಡೊಸಲ್ಫಾನ್ ಪೀಡಿತ ಹಾಗೂ ಮಾನಸಿಕ ಭಿನ್ನ ಸಾಮರ್ಥ್ಯ ದ ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ಮೂಡಿಬರಲಿದೆ ಎಂದರು.
ರಾಜಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಂದೀಪ್ ರೆಂಕೆದಗುತ್ತು ಅಧ್ಯಕ್ಷತೆಯಲ್ಲಿ ಸಭಾ ಕಾರ‍್ಯಕ್ರಮ ನಡೆಯಲಿದ್ದು, ಶಾಸಕ ಹರೀಶ್ ಪೂಂಜ ಕಾರ‍್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಡಾ| ವಸಂತ್ ಕುಮಾರ್ ಶೆಟ್ಟಿ ಆಡಳಿತ ಅಧಿಕಾರಿ, ಸಾನಿಧ್ಯ ಸಮೂಹ ಸಂಸ್ಥೆಗಳು ಮಂಗಳೂರು ಮತ್ತು ಉಜಿರೆ, ಪ್ರತಾಪ್ ಸಿಂಹ ನಾಯಕ್ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸುರೇಶ್ ಕುಮಾರ್ ತಹಶೀಲ್ದಾರರು ಬೆಳ್ತಂಗಡಿ, ಶಿವಕುಮಾರ್ ಇನ್ಸಪೆಕ್ಟರ್, ಬೆಳ್ತಂಗಡಿ ಪೊಲೀಸ್ ಠಾಣೆ, ಸಾಜುದ್ದಿನ್ ಎಂಡೊಸಲ್ಪನ್ ಕಾರ‍್ಯಕ್ರಮ ವ್ಯವಸ್ಥಾಪಕರು ದ.ಕ ಜಿಲ್ಲೆ, ಅಜೇಯ್ ತಾಲೂಕು ಕಾರ‍್ಯಕ್ರಮದ ನಿರೂಪಕರು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ತಾಲೂಕು, ಸಂಪತ್ ಬಿ. ಅಧ್ಯಕ್ಷರು ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ, ಡಾ| ಎಂ.ಎಂ ದಯಾಕರ್ ಸಂಚಾಲಕರು, ಬೆಳ್ತಂಗಡಿ ತಾಲೂಕು ವೈದ್ಯಕೀಯ ಪ್ರಕೊಪ್ಪ, ಡಾ| ಗೋಪಾಲಕೃಷ್ಣ ಡೈರೆಕ್ಟರ್, ಉಜಿರೆ ಬೆನಕ ಹಾಸ್ಪಿಟಲ್, ಇಸ್ಮಾಯಿಲ್ ಮೂಡುಸೆಡ್ಡೆ ಚಲನಚಿತ್ರ ನಿರ್ದೇಶಕರು, ಪ್ರಸಾದ್ ಶೆಟ್ಟಿ ಎಣಿಂಜೆ ಕಾರ್ಯದರ್ಶಿ, ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ, ಕಿಶೋರ್ ಕುಮಾರ್ ಶ್ರೀ ಮಂತ್ರದೇವತಾ ಕ್ಷೇತ್ರ, ಕಟ್ಟೆಮಾರ್, ವಿಜಯವಾಣಿ, ಉದ್ಯಮಿಗಳು ಬೆಳ್ತಂಗಡಿ, ಜಯಾನಂದ ಗೌಡ ಉಪಾಧ್ಯಕ್ಷರು, ನಗರ ಪಂಚಾಯತ್ ಬೆಳ್ತಂಗಡಿ , ಶಂಕರ್ ರಾವ್ ಬಿ. ಅಧ್ಯಕ್ಷರು, ಜೆಸಿಐ ಬೆಳ್ತಂಗಡಿ, ಅಶ್ವಥ್ ಕುಮಾರ್ ಮುಖ್ಯ ಕಾರ್ಯನಿರ್ವಾಹಕರು, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ, ಮೀನಾ ಕುಮಾರ್ ಎಸ್‌ಡಿಎಂಸಿ ಅಧ್ಯಕ್ಷರು, ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಭಾಗವಹಿಸಲಿದ್ದಾರೆ.