ರಾಜ್ಯ ವಿಧಾನಸಭಾ ಅವಧಿ ಮೇ 24ಕ್ಕೆ ಅಂತ್ಯ: 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

ಬೆಂಗಳೂರು: ರಾಜ್ಯ ವಿಧಾನಸಭಾ ಅವಧಿಯು ಮೇ 24ಕ್ಕೆ ಅಂತ್ಯವಾಗಲಿದ್ದು, ಈ ಬಾರಿಯ ವಿಧಾನ ಸಭಾ ಚುನಾವಣೆ ವೇಳೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನದ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿ ಮತ್ತು 15 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿದ್ದು, ಸಾಮಾನ್ಯ 173 ಕ್ಷೇತ್ರಗಳು ಇದೆ. ಈ ಬಾರಿ 9.17 ಲಕ್ಷ ಹೊಸ ಮತದಾರಿದ್ದು ಒಟ್ಟು 5.21 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 2018ರಲ್ಲಿ ಹಿರಿಯ ಮತದಾರರ ಸಂಖ್ಯೆ 9.17 ಇತ್ತು. ಇದರಲ್ಲಿ ಶೇ.32.5ರಷ್ಟು ಏರಿಕೆ ಕಂಡಿದ್ದು ಈ ಬಾರಿ 80 ವರ್ಷಕ್ಕೂ ಮೇಲ್ಪಟ್ಟವರು 12.15 ಲಕ್ಷ ಜನ ಮತದಾರರು ಇದ್ದಾರೆ. ಜೊತೆಗೆ ವಿಶೇಷಚೇತನರ ಮತದಾರರ ಸಂಖ್ಯೆ 5.55 ಲಕ್ಷ ಇದ್ದು, 2018ರಲ್ಲಿ ಇವರ ಸಂಖ್ಯೆ 2.15 ಲಕ್ಷ ಮಾತ್ರ ಇತ್ತು . 42,756 ತೃತೀಯ ಲಿಂಗಿಗಳು ಇದ್ದು, 41,312 ಜನರು ಮತದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳಲ್ಲಿ ಒಟ್ಟಾರೆ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 1,320 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳೇ ನಿರ್ವಹಿಸುತ್ತಾರೆ. ದುರ್ಬಲ ಬುಡಕಟ್ಟು ಜನರು ಕೂಡ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಆಯೋಗ ಬಯಸುತ್ತಿದೆ. ಈ ನಿಟ್ಟಿನಲ್ಲಿ ಬುಡಕಟ್ಟಿನ 18 ವರ್ಷಕ್ಕಿಂತ ಮೇಲ್ಪಟ್ಟ ಅರ್ಹ 31,517 (ಶೇ.100ರಷ್ಟು) ಜನರ ನೋಂದಣಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

error: Content is protected !!