ಏಳನೇ ಪರಿಷ್ಕೃತ ವೇತನ ಜಾರಿಗಾಗಿ ಪಟ್ಟು : ಸರಕಾರಿ ಸೇವೆಗಳು ಬಂದ್..!: ಮುಷ್ಕರಕ್ಕೆ 42 ಸರ್ಕಾರಿ ಇಲಾಖೆಗಳ ಬೆಂಬಲ: ಪರೀಕ್ಷಾ ಸಂದರ್ಭದಲ್ಲೇ ಶಾಲಾ-ಕಾಲೇಜ್‌ಗೆ ರಜೆ: ಪಬ್ಲಿಕ್ ಪರೀಕ್ಷೆಯ ಸಂಕಷ್ಟದಲ್ಲಿ ವಿದ್ಯಾರ್ಥಿಗಳು: ಅಸಮಧಾನ ವ್ಯಕ್ತಪಡಿಸಿದ ಪೋಷಕರು…

ಬೆಳ್ತಂಗಡಿ : ಇಂದಿನಿಂದ ಸರ್ಕಾರಿ ನೌಕರರು ಏಳನೇ ಪರಿಷ್ಕೃತ ವೇತನ ಜಾರಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲಿದ್ದು ಈಗಾಗಗಲೆ ಸರಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಏಳನೇ ಪರಿಷ್ಕೃತ ವೇತನ ಜಾರಿಗೆ ಸಂಬಂಧಿಸಿದಮತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೆ ಮಂಗಳವಾರ ಸರ್ಕಾರಿ ನೌಕರರ ಸಂಧಾನ ಸಭೆ ವಿಫಲವಾದ ಕಾರಣ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಸುಮಾರು 10 ಲಕ್ಷ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿ ಆಕ್ರೋಶ ಹೊರಹಾಕಲಿದ್ದಾರೆ. ಸರ್ಕಾರದ ಯಾವುದೇ ಇಲಾಖೆಗಳು ಇಂದು ಕಾರ್ಯನಿರ್ವಹಿಸುವುದಿಲ್ಲ. ಸುಮಾರು 42 ಸರ್ಕಾರಿ ಇಲಾಖೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಎಲ್ಲಾ ಕಚೇರಿಗಳು, ಬಿಬಿಎಂಪಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್ ಗಳು, ತಾಲೂಕು ಕಚೇರಿ, ಜಿಲ್ಲಾ ಕಚೇರಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಕಂದಾಯ ಇಲಾಖೆ ವ್ಯಾಪ್ತಿಯ ಖಾತೆ, ಪಹಣಿ, ತೆರಿಗೆ ಪಾವತಿ, ದೃಢೀಕರಣ ಪತ್ರ, ಜನನ, ಮರಣ ಪತ್ರ, ವಂಶವೃಕ್ಷ, ಸರ್ವೆಯರ್ ಸಿಗುವುದು ಅನುಮಾನ. ಜಲಮಂಡಳಿ ಸೇವೆ, ಆರೋಗ್ಯ ಸೇವೆಗಳಲ್ಲೂ ವ್ಯತ್ಯಯ ಉಂಟಾಗಲಿದೆ. ಯಾವುದೇ ಓಪಿಡಿ ಸೇವೆಗಳೂ ಇರುವುದಿಲ್ಲ.ಮುಷ್ಕರದಲ್ಲಿ ಸರ್ಕಾರಿ ವೈದ್ಯರು, ನರ್ಸ್ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಶಿಕ್ಷಣ ಇಲಾಖೆ ನೌಕರರು ಭಾಗಿಯಾಗಲಿದ್ದಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆ ಉಂಟಾಗುವ ಸಾಧ್ಯತೆ ಇದೆ. ಎಲ್ಲ ಸರ್ಕಾರಿ ಶಿಕ್ಷಕರು ಮುಷ್ಕರದಲ್ಲಿ ಭಾಗಿಯಾಗುವ ಹಿನ್ನೆಲೆ ಶಾಲೆಗೆ ರಜೆ ಘೋಷಿಸಲಾಗಿದೆ. ಆದರೆ ಪರೀಕ್ಷಾ ಸಮಯದಲ್ಲೇ ಇಂತಹ ನಿರ್ಧಾರ ಕೈಗೊಂಡಿರುವುದು ಮಕ್ಕಳ ಪೋಷಕರಲ್ಲಿ ಬೇಸರ ಉಂಟುಮಾಡಿದೆ. ಅಲ್ಲದೆ ಈ ಬಾರಿ ಕೇವಲ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ 5 ಹಾಗೂ 8ನೇ ತರಗತಿ ಮಕ್ಕಳಿಗೂ ಪಬ್ಲಿಕ್ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

 

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಂದ್‌ಗೆ ಬಾಹ್ಯ ಬೆಂಬಲ ನೀಡಿದ್ದು, ಸಾರಿಗೆ ಸೇವೆಯಲ್ಲಿ ಹೆಚ್ಚಿನ ವ್ಯತ್ಯಯವಾಗುವುದಿಲ್ಲ.  ಆಸ್ಪತ್ರೆಗಳಲ್ಲಿ  ಅಪಘಾತ, ಡೆಲಿವರಿ, ಪೋಸ್ಟ್ ಮಾರ್ಟಮ್ ಸೇರಿದಂತೆ ಇತರೆ ತುರ್ತು ಸೇವೆಗಳು ಲಭ್ಯ ಇರಲಿವೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರಲಿದೆ. ಸ್ಮಶಾನ ಸೇರಿದಂತೆ ಕೆಲ ನೌಕರರು ಕಾರ್ಯ ಮಾಡಲಿದ್ದಾರೆ.

error: Content is protected !!