ಜನತೆಗೆ ಬಿಗ್ ಶಾಕ್ ,ಎಲ್‌ಪಿಜಿ ರೇಟ್ ಗಗನಕ್ಕೆ..!:ವಾಣಿಜ್ಯೋದ್ಯಮ ಸಿಲಿಂಡರ್ ಬೆಲೆ ₹350ಕ್ಕೆ ಏರಿಕೆ:ಗೃಹಬಳಕೆ ಸಿಲಿಂಡರ್ ಬೆಲೆಯೂ ಏರಿಕೆ..!

ಗ್ಯಾಸ್ ಬೆಲೆ ಮತ್ತಷ್ಟು ಏರಿಕೆ ಕಂಡಿದ್ದು, ವಾಣಿಜ್ಯೋದ್ಯಮ ಸಿಲಿಂಡರ್ ಬೆಲೆ ಬರೊಬ್ಬರಿ ₹350 ಕ್ಕೆ ಏರಿಕೆಯಾಗಿ ಜನರಿಗೆ ಬಿಗ್ ಶಾಕ್ ನೀಡಿದೆ. ತೈಲ ಮಾರುಕಟ್ಟೆ ಕಂಪನಿಗಳು 2023ರ ಮೂರನೇ ತಿಂಗಳು ಸಹ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ 350.50 ರೂ ಗೆ ಏರಿಕೆಯಾಗಿದ್ದು, ಜನಸಾಮಾನ್ಯರ ಮೇಲೂ ಇದು ಪರಿಣಾಮ ಬೀರಲಿದೆ. ಗ್ಯಾಸ್ ಬೆಲೆ ಏರಿಕೆ ಹೋಟೆಲ್, ರೆಸ್ಟೋರೆಂಟ್‌ನ ಆಹಾರ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೇಲವ ವಾಣಿಜ್ಯೋದ್ಯಮ ಸಿಲಿಂಡರ್ ಬೆಲೆ ಮಾತ್ರವಲ್ಲದೆ ಗೃಹಬಳಕೆಯ ಸಿಲಿಂಡರ್ ದರವೂ 50 ರೂಪಾಯಿಗೆ ಏರಿಕೆಯಾಗಿದೆ. ಮೊದಲೇ ಗ್ಯಾಸ್ ಬೆಲೆ ಹೆಚ್ಚಾಗಿದೆ ಎಂದು ಗೋಳಾಡುತ್ತಿದ್ದ ಜನರಿಗೆ ಈಗ ಮತ್ತೆ ಗ್ಯಾಸ್ ಬೆಲೆ ಗಗನಕ್ಕೇರಿ ಮತ್ತೆ, ಮತ್ತೆ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಸದ್ಯ ಪೆಟ್ರೋಲ್, ಡೀಸೆಲ್ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

error: Content is protected !!