ಚಾರ್ಮಾಡಿ ಘಾಟ್ ನಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ..! ರಸ್ತೆ ಬದಿಯ ಚರಂಡಿಯಲ್ಲಿ ಮೃತ ದೇಹ ಪತ್ತೆ.

 

 

 

ಬೆಳ್ತಂಗಡಿ : ಚಾರ್ಮಾಡಿ ಘಾಟ್ ರಸ್ತೆಯ ಮಲಯ ಮಾರುತ ಎಂಬಲ್ಲಿ ರಸ್ತೆ ಬದಿಯ ಚರಂಡಿಯಲ್ಲಿ ಕಡವೆಯ ಮೃತದೇಹವೊಂದು ಫೆ 08 ತಂದು ಕಂಡುಬಂದಿದ್ದು
ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರಬಹುದೆಂದು ಶಂಕಿಸಲಾಗಿದೆ.

ಬೇಟೆಗಾರರ ಗುಂಡೇಟು ತಿಂದ್ದು ಕಡವೆ ಓಡಿಬಂದು ರಸ್ತೆಯ ಬದಿಯಲ್ಲಿ ಮೃತ ಪಟ್ಟಿರುವ ಸಾಧ್ಯತೆ ಇದ್ದು

ಕಡವೆಯ ಕಾಲು,ಕಿವಿ, ಹೊಟ್ಟೆ ಭಾಗದಲ್ಲಿ ಗುಂಡು ತಗುಲಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಂದಾಜು
ಮೂರು ವರ್ಷ ವಯಸ್ಸಿನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಚಾರ್ಮಾಡಿ ಘಾಟ್ ಹೆದ್ದಾರಿ ಮಾರ್ಗವಾಗಿ ಪ್ರಯಾಣಿಸುವ ವಾಹನ ಚಾಲಕರು ಕಡವೆ ಮೃತದೇಹವನ್ನು ಕಂಡು ಕೊಟ್ಟಿಗೆಹಾರ ಅರಣ್ಯ ಚೆಕ್‌ಪೋಸ್ಟ್ ಗೆ ಮಾಹಿತಿ ನೀಡಿದ್ದಾರೆ.ಈ ಬಗ್ಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!