ಕ್ರೀಡೆಯಿಂದ ಸಾಮಾರಸ್ಯ ಸಾಧ್ಯ:ಮಿಥುನ್ ರೈ ಚಿಗುರು ಫ್ರೆಂಡ್ಸ್ ಮೂಡುಕೊಣಾಜೆ , ವತಿಯಿಂದ ವಾಲಿಬಾಲ್ ಪಂದ್ಯಾಟ:

 

 

 

ಮೂಡಬಿದ್ರೆ: ಜಾತಿ ಧರ್ಮ ಮೇಲು ಕೀಳೆಂಬ ಬೇಧಭಾವ ಇಲ್ಲದೇ ಸಾಮರಸ್ಯ ದಿಂದ ಬಾಳಲು ಇಂತಹ ಕ್ರೀಡೆಗಳು ಪ್ರೇರಣೆಯಾಗಲಿ ಎಂದು ಯುವ ನಾಯಕ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಹೇಳಿದರು. ಅವರು ಮೂಡುಕೋಣಾಜೆ ಮೆಂಚದ ಪಾದೆಯಲ್ಲಿ ದಿವಂಗತ . ಎಂ. ಶೇಖರ ಮತ್ತು ಅರುಣ್ ಹೆಗ್ಡೆ ಅವರ ಸ್ಮರಣಾರ್ಥ ಚಿಗುರು ಫ್ರೆಂಡ್ಸ್ ವತಿಯಿಂದ ನಡೆದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಮಾತನಾಡಿದರು.

 

 

 

 

ಚಿಗುರು ಫ್ರೆಂಡ್ಸ್ ನ ಯುವಕರು ಸಂಘಟಿತರಾಗಿ ಇಂತಹ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಕ್ರೀಡೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ.ಕೊರೊನಾ ಕಾರಣಗಳಿಂದ ಕಳೆದ ಎರಡು ವರುಷಗಳಿಂದ ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗದಿದ್ದರೂ ಹೊನಲು ಬೆಳಕಿನ ಮೂಲಕ ಕ್ರೀಡಾಕೂಟದ ಉತ್ತಮ ಕ್ರೀಡಾಕೂಟವನ್ನು ಚಿಗುರು ಫ್ರೆಂಡ್ಸ್ ಮಾಡಿದೆ. ಶಾಶ್ವತವಾಗಿ ಇನ್ನಷ್ಟು ಎತ್ತರಕ್ಕೆ ಹೆಸರು ಗಳಿಸಲಿ ಅದೇ ರೀತಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ ಎಂದರು .ಪಂದ್ಯಾಟದಲ್ಲಿ ಚಾಪಿಯನ್ ಆಗಿ ಯುನೈಟೆಡ್‌ ಅಲಂಗಾರ್ ಹಾಗೂ ದ್ವಿತೀಯ ಸ್ಥಾನಿಯಾಗಿ ಬಿರ್ನೊಟ್ಟು ಫ್ರೆಂಡ್ಸ್ ಮಾರೂರು ಟ್ರೋಫಿ ಪಡೆದುಕೊಂಡಿವೆ. ಕ್ರೀಡಾಕೂಟದಲ್ಲಿ ವಿವಿಧ ಗಣ್ಯರು ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರುಗಳು ಭಾಗವಹಿಸಿ ಶುಭ ಹಾರೈಸಿದರು. ಚಿಗುರು ಫ್ರೆಂಡ್ಸ್ ನ ಎಲ್ಲಾ ಪದಾಧಿಕಾರಿಗಳು ಸದಸ್ಯರು ಹಾಗೂ ಸ್ಥಳೀಯರು ಕ್ರೀಡಾಕೂಟ ಯಶಸ್ವಿಯಾಗಲು ಸಹಕರಿಸಿದ್ದಾರೆ ಎಂದು ಚಿಗುರು ಫ್ರೆಂಡ್ಸ್ ಅಧ್ಯಕ್ಷ ನಾಗೇಶ್ ಕೃತಜ್ಞತೆ ಸಲ್ಲಿಸಿದರು.

error: Content is protected !!