ಬೆಳ್ತಂಗಡಿ: ವಕೀಲರ ನೂತನ ಕಚೇರಿ ಉದ್ಘಾಟನೆ

ಬೆಳ್ತಂಗಡಿ: ವಕೀಲರಾದ ನವೀನ್ ಬಿ.ಕೆ. ಎಂ,ವಿನಯ್ ಕುಮಾರ್ ಹಾಗೂ ಅನಂತ್ ಮೋಹನ ರಾವ್ ಯು.ಎಂ ಇವರ ನೂತನ ವಕೀಲರ ಕಛೇರಿಯು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ನೊರೋನಾ ಬಿಲ್ಡಿಂಗ್ ನಲ್ಲಿ ಜ.19ರಂದು ಉದ್ಘಾಟನೆಗೊಂಡಿತು. ವಕೀಲರಾದ ಬಿ.ಕೆ.ಧನಂಜಯ ರಾವ್ ದೀಪ ಬೆಳಗಿಸಿ ಕಛೇರಿ ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಅತಿಥಿಗಳಾಗಿ ಎಸ್. ಕೆ.ಡಿ.ಆರ್.ಡಿ.ಪಿ
ನಿವೃತ್ತ ಪ್ರಾದೇಶಿಕ ನಿರ್ದೆಶಕ ಕೆ.ಬೂದಪ್ಪ ಗೌಡ . ನವೀನ ಬಿ.ಕೆ ತಾಯಿ ಯಮುನ, ಪತ್ನಿ ಮತ್ತು ಮಕ್ಕಳು, ವಿನಯ್ ಎಂ ಕುಟುಂಬಸ್ಥರು, ವಕೀಲರುಗಳಾದ ಸಂತೋಷ್ ಕುಮಾರ್ ಶ್ರೀನಿವಾಸ ಗೌಡ , ದಿನೇಶ್ ಶೆಟ್ಟಿ, ರಾವ್ ಅಸೋಸಿಯೇಟ್ಸ್ ನ ಸಿಬ್ಬಂದಿ ವರ್ಗ , ಸಂಘದ ಅಧ್ಯಕ್ಷರಾದ ಪ್ರಸಾದ್ ಕೆ.ಎಸ್ ಹಾಗೂ ರತ್ನವರ್ಮ ಬುಣ್ಣು ಭಾಗವಹಿಸಿ ಶುಭಹಾರೈಸಿದರು.ವಕೀಲ ಮನೋಹರ ಕುಮಾರ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!