ಜ.22 ರಂದು ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ಕಾಂಗ್ರೆಸ್ “ಪ್ರಜಾಧ್ವನಿ ಯಾತ್ರೆ”:ಜಿಲ್ಲಾ ಹಾಗೂ ತಾಲೂಕು ನಾಯಕರ ಸಮ್ಮುಖದಲ್ಲಿ ಪೂರ್ವ ಸಮಾಲೋಚನಾ ಸಭೆ:ಯುವನಾಯಕ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲಾ ನಾಯಕರು ಒಂದೇ ವೇದಿಕೆಯಲ್ಲಿ..!

ಬೆಳ್ತಂಗಡಿ: ಜ.22 ರಂದು ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ “ಪ್ರಜಾಧ್ವನಿ ಯಾತ್ರೆ” ನಡೆಯಲಿದ್ದು, ಜ.19 ರಂದು ಬೆಳ್ತಂಗಡಿಯ ನಗರ ಮತ್ತು ಗ್ರಾಮೀಣ ಬ್ಲಾಕಿನ ಗುರುನಾರಾಯಣ ಸ್ವಾಮಿ ಸಭಾಂಗಣದಲ್ಲಿ ಪೂರ್ವ ಸಮಾಲೋಚನಾ ಸಭೆ ನಡೆಯಿತು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಮಾತನಾಡಿ ‘ಪ್ರಜಾಧ್ವನಿ ಯಾತ್ರೆ ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ  ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜಶೇಖರ ಅಜ್ರಿ, ಕೆ. ಪಿ. ಸಿ. ಸಿ ಸದಸ್ಯ ಮೋಹನ್ ಶೆಟ್ಟಿಗಾರ್, ಕೆ. ಪಿ. ಸಿ. ಸಿ ಉಸ್ತುವಾರಿಗಳಾದ ಮಾಜಿ ಜಿ. ಪಂ ಸದಸ್ಯ ಎಂ. ಎಸ್. ಮಹಮ್ಮದ್, ಕೃಷ್ಣಮೂರ್ತಿ, ಶಾಹಿದ್ ತೆಕ್ಕಿಲ್, ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್, ರಂಜನ್ ಜಿ ಗೌಡ, ಕೆ. ಪಿ. ಸಿ. ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಪಡ್ಪು, ಜಿಲ್ಲಾ ಎಸ್. ಸಿ ಮೋರ್ಚಾ ಅಧ್ಯಕ್ಷ ಶೇಖರ್ ಕುಕ್ಕೆಡಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಕೆ. ಕೆ ಶಾಹುಲ್ ಹಮೀದ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!