ಕಣಿಯೂರಿನಲ್ಲಿ ‘ಯುವಕೇಸರಿ ಕಣಿಯೂರು’ ಸಂಘಟನೆ ಉದ್ಘಾಟನೆ : ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಬೆೆಳ್ತಂಗಡಿ; ಕಣಿಯೂರು ಗ್ರಾಮದ ಯುವಕೇಸರಿ ಕಣಿಯೂರು ಇದರ ಉದ್ಘಾಟನಾ ಕಾರ್ಯಕ್ರಮ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವು ಜ.12ರಂದು ಕಣಿಯೂರು ಕಸಬಾ ಶಾಲೆಯಲ್ಲಿ ನಡೆಯಿತು.

ಯುವಕೇಸರಿ ಸಂಘವನ್ನು ರೈತಬಂಧು ಆಹಾರೋದ್ಯಮ ಪ್ರೈ ಲಿ ಇದರ ಮಾಲಕರಾದ ಶಿವಶಂಕರ ನಾಯಕ್‌ರವರು ದೀಪ ಪ್ರಜ್ವಲಿಸಿ ಉದ್ಘಾಟಿಸುವ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಸೇಸಪ್ಪ ಮೂಲ್ಯ, ಯಶೋಧರ ಶೆಟ್ಟಿ ಕಣಿಯೂರು,ಕಣಿಯೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಗೌಡ ಅಲೆಕ್ಕಿ, ಯುವ ಕೇಸರಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಯುವ ಕೇಸರಿಯ ಅಧ್ಯಕ್ಷ ಪ್ರವೀಣ್ ಗೌಡ ಅಲೆಕ್ಕಿ ಸ್ವಾಗತಿಸಿ, ಗೌರವಾಧ್ಯಕ್ಷ ರಕ್ಷಿತ್ ಪಣೆಕ್ಕರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಯುವಕೇಸರಿ ಕಣಿಯೂರು ಇದರ ಕಾರ್ಯದರ್ಶಿ ಯತೀಶ್ ಶೆಟ್ಟಿ ಪಣೆಕ್ಕರ ಕಾರ್ಯಕ್ರಮ ನಿರೂಪಿಸಿದರು.

error: Content is protected !!