ನೆರಿಯ: ವ್ಯಕ್ತಿ ಅನುಮಾನಸ್ಪದ ಸಾವು: ಮಂಚದ ಕೆಳಗೆ ಮೃತದೇಹ ಪತ್ತೆ: ಸ್ಥಳೀಯರಿಂದ ಪ್ರಕರಣ ಬೆಳಕಿಗೆ, ಪೊಲೀಸರಿಗೆ ಮಾಹಿತಿ

ಬೆಳ್ತಂಗಡಿ: ನೆರಿಯ ಗ್ರಾಮದ ನೆಕ್ಕರೆ ಎಂಬಲ್ಲಿ ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ.

ನೆರಿಯ ಗ್ರಾಮದ ನೆಕ್ಕರೆ ಎಂಬಲ್ಲಿ ಸುಮಾರು 62 ವರ್ಷದ ಶಿವದಾಸ್ ಎಂಬವರು ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದಿದ್ದು ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರಕ್ಕಾಗಿ ಕಟ್ಟಿಗೆ ಸಿದ್ಧತೆಗಾಗಿ ಸ್ಥಳೀಯ ನಿವಾಸಿಯಾದ ಗೋಪಾಲ್ ಕೃಷ್ಣ ಟಿ.ಎನ್ (60) ಇವರನ್ನು ಕರೆಯಲು ಹೋದಾಗ ಅವರು ಮನೆಯ ಒಳಗಡೆ ಮಂಚದಿಂದ ಕೆಳಗಡೆ ಬಿದ್ದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು ಅವರು ಉದ್ಯೋಗ ನಿಮಿತ್ತ ಹೊರ ಹೋಗಿದ್ದರು ಎನ್ನಲಾಗಿದ್ದು ಯಾವ ರೀತಿ ಮೃತ ಪಟ್ಟಿರಬಹುದು ಎಂಬುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ.

error: Content is protected !!