ರಕ್ಷಿತ್ ಶಿವರಾಂ ನೇತೃತ್ವದ ಜಾಥಕ್ಕೆ ಬೆಂಬಲ ಇಲ್ಲ…! ಮಾಜಿ ಶಾಸಕ ವಸಂತ ಬಂಗೇರ ಗೊಂದಲಕಾರಿ ಹೇಳಿಕೆ..?

 

 

ಬೆಳ್ತಂಗಡಿ:  ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ನಡೆಯುವ ಹೋರಾಟ ನನ್ನ ಗಮನಕ್ಕೂ ಬಂದಿಲ್ಲ ಹಾಗೂ ಅದಕ್ಕೆ ಬೆಂಬಲ ಇಲ್ಲ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ. ಅವರು ಜ 02 ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ಸರ್ಕಾರದ ಹಾಗೂ ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಜ 07 ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ  ಬಗ್ಗೆ ಪತ್ರಿಕಾಗೋಷ್ಠಿ ಸಂದರ್ಭ ಮಾಧ್ಯಮದವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

 

ನೇತ್ರಾವತಿ ಉಳಿಸಿ ಭ್ರಷ್ಟಾಚಾರ ನಿಲ್ಲಿಸಿ ಹಾಗೂ ವಿವಿಧ ವಿಚಾರಗಳ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥ ಜ 08 ರಂದು ಮುಂಡಾಜೆಯಿಂದ ಉಪ್ಪಿನಂಗಡಿಯವರೆಗೆ ಹಾಗೂ ಬೆಳ್ತಂಗಡಿಯಲ್ಲಿ ಹಕ್ಕೊತ್ತಾಯ ಸಭೆಯು ನಡೆಯಲಿದ್ದು ಈ ಬಗ್ಗೆ ತಾಲೂಕಿನಾದ್ಯಂತ ಪೂರ್ವಭಾವಿ ಸಭೆಗಳು ನಡೆಯುತಿದ್ದು . ಈ ಸಭೆಗೆ ಕಾಂಗ್ರೆಸ್ ಪಕ್ಷದ ಬೆಂಬಲ ಇದೆಯೇ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕಾಗಲಿ ನನಗಾಗಲಿ ಯಾವುದೇ ಮಾಹಿತಿ ಇಲ್ಲ ಜ 07 ರಂದು ನಡೆಯುವ ಪ್ರತಿಭಟನೆ ಪಕ್ಷದ ಅಧಿಕೃತ ಕಾರ್ಯಕ್ರಮವಾಗಿದ್ದು ಜ 08 ರಂದು ನಡೆಯುವ ಜಾಥ ಅವರ ವೈಯಕ್ತಿಕ ಕಾರ್ಯಕ್ರಮವಾಗಿರಬಹುದು ಅದ್ದರಿಂದ ಅದಕ್ಕೆ ಬೆಂಬಲ ಇಲ್ಲ ಎಂದು ಗೊಂದಲಕಾರಿ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಗಂಗಾಧರ್ ಗೌಡ, ಶೈಲೇಶ್ ಕುಮಾರ್, ರಂಜನ್ ಗೌಡ, ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

 

 

error: Content is protected !!