ಹೊಸ ವರುಷದ ಮೊದಲ ದಿನವೇ ಭೀಕರ ರಸ್ತೆ ಅಪಘಾತ:ವೇಣೂರು ಬಳಿ ಬಸ್ಸ್ ಇನೋವಾ ಕಾರು ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು..!

 

ಗುರುವಾಯನಕೆರೆ :ಹೊಸ ವರುಷದ ಮೊದಲ ದಿನವೇ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ.

ವೇಣೂರು ಮೂಡಬಿದಿರೆ  ರಸ್ತೆಯ ಗೊಳಿಯಂಗಡಿ ಬಳಿ ಇನೋವಾ ಕಾರು ಹಾಗೂ ಖಾಸಗಿ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

 

ಮೂಡಬಿದಿರೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದ ಇನೋವಾ , ಬೆಳ್ತಂಗಡಿಯಿಂದ ಮೂಡಬಿದಿರೆಗೆ ಹೋಗುತ್ತಿದ್ದ ಬಸ್ ನಡುವೆ ಈ ಅವಘಡ ಸಂಭವಿಸಿದೆ.

ಮೂಡಬಿದ್ರೆಯ ಗಂಜಿಮಠ ಸುರಲ್ಪಾಡಿ ನಿವಾಸಿ ನೌಷದ್ ಹಾಜಿ (47) ಮತ್ತು ಚಾಲಕ ಉಲಾಯಿಬೆಟ್ಟು ನಿವಾಸಿ ಫಾಜಿಲ್(21) ಸಾವನ್ನಪ್ಪಿದವರು ಎಂಬ ಮಾಹಿತಿ ‌ಲಭ್ಯವಾಗಿದೆ.ಹೆಚ್ಚಿನ ವಿವರ ಇನ್ನಷ್ಟೆ ತಿಳಿದು ಬರಬೇಕಾಗಿದೆ.

error: Content is protected !!