ಉಜಿರೆಯ ಮುಂಡತ್ತೋಡಿ ಬಳಿ ವ್ಯಕ್ತಿ ಆತ್ಮಹತ್ಯೆ..

 

 

 

 

 

ಬೆಳ್ತಂಗಡಿ :ಉಜಿರೆ ಗ್ರಾಮದ  ಮುಂಡತ್ತೋಡಿ ಎಂಬಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ 31 ರಂದು ನಡೆದಿದೆ. ಮುಂಡತ್ತೋಡಿ ನಿವಾಸಿ ಸಂಜೀವ -ಪುಷ್ಪಾ ದಂಪತಿಗಳ ಮಗ ಪ್ರಭಾಕರ ಪೂಜಾರಿ(41) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ಆಟೋ ಚಾಲಕರಾಗಿದ್ದ ಇವರು ಕಳೆದ ಕೆಲ ಸಮಯದಿಂದ ಮನೆಯಲ್ಲಿಯೇ ಇದ್ದರು. ಮುಂಡತ್ತೋಡಿ ಶ್ರೀ ಯುವಕ ಮಂಡಲ ದ ಸದಸ್ಯರು ಆಗಿರುವ
ಪ್ರಭಾಕರ ಪೂಜಾರಿಯವರು  ಪತ್ನಿ  ಮೀನಾಕ್ಷಿ  ಹಾಗೂ  5 ವರ್ಷದ ಹೆಣ್ಣು‌ ಮಗುವನ್ನು ಅಗಲಿದ್ದಾರೆ.  ಎರಡು ವರ್ಷದ ಹಿಂದೆ ಪ್ರಭಾಕರ ಅವರ ತಮ್ಮ ಪ್ರಶಾಂತ್ ಪೂಜಾರಿ ಮುಂಡಾಜೆ ಬಳಿಯ ಸೀಟ್ ಎಂಬಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

error: Content is protected !!