ಬೆಳ್ತಂಗಡಿ : ಶಬರಿಮಲೆ ಯಾತ್ರೆಗೆ ಹೊರಟ್ಟಿದ್ದ ಯಾತ್ರಿಕರ ಮಿನಿ ಬಸ್ ಮುಂಡಾಜೆ ಬಳಿ ಅಪಘಾತಕ್ಕೀಡಾಗಿದ್ದು ಬ್ರೇಕ್ ಫೈಲ್ ಆಗಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಕೂಡ್ಲಿಗಿ ತಾಲೂಕಿನ 21 ಮಾಲಾಧಾರಿಗಳು ಮಿನಿ ಬಸ್ ನಲ್ಲಿ ಚಾರ್ಮಾಡಿ ಘಾಟ್ ಮೂಲಕ ಶಬರಿಮಲೆಗೆ ಪ್ರಯಾಣ ಮಾಡುವಾಗ ಇಂದು ಬೆಳಗ್ಗೆ 6:30 ರ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ಬ್ರೇಕ್ ಫೈಲ್ ಅಗಿ ಮಕ್ಕೆ ಡಿಕ್ಕಿ ಹೊಡೆದು ಅರಣ್ಯಕ್ಕೆ ಚಲಿಸಿದೆ. ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿದ್ದು ,5 ಜನರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡ ನಿವಾಸಿಗಳಾದ ವೀರೇಶ್ ಆಚಾರ್ಯ (38),ಕೆ.ಎಸ್. ರಾಹುಲ್ (6),ಗೌತಮ್ (6),ಸುನೀಲ್ ನಾಯ್ಕ್ (33),ಜಲಂದರ್ (25) ಗಂಭೀರ ಗಾಯಗೊಂಡಿದ್ದು ಐದು ಜನರಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದೆ
ಪಾಂಡುರಂಗ (25),ಶಶಿ ಕುಮಾರ್ (25) ಇವರಿಬ್ಬರಿಗೆ ಉಜಿರೆ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತನ್ಮಾಯಿ(9) ,ರಾಜು ನಾಯ್ಕ್(42),ಮಂಜುನಾಥ್(29), ಎಮ್.ಕೆ.ಸೋಮಶೇಖರ್(15) , ವಿಕ್ರಮ್ (30) , ಕಾರ್ತಿಕ್(27), ಜೆ.ಎಮ್.ರಾಘು ನಾಯ್ಕ್(30), ಲೋಕಪ್ಪ(40), ಅಜ್ಜಪ್ಪ(34), ಕರಿಯ ಗೌಡ(39), ಎನ್.ಕೆ.ಬಸವರಾಜ್(40) ಸೇರಿ 11 ಮಂದಿಗೆ ಕಕ್ಕಿಂಜೆಯ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟೆಂಪೋ ವಾಹನದಲ್ಲಿ ಒಟ್ಟು 21 ಜನರಿದ್ದು ಇದರಲ್ಲಿ 18 ಜನರಿಗೆ ಗಾಯವಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.