ಕಾಂಗ್ರೆಸ್ ಪಕ್ಷ ಸೇರೊದು ಖಚಿತ: ಊಹಾಪೋಹಗಳಿಗೆ ಬೆಳ್ತಂಗಡಿಯಲ್ಲಿ ತೆರೆ ಎಳೆದ ವೈಎಸ್ ವಿ ದತ್ತ:

 

 

ಬೆಳ್ತಂಗಡಿ:  ಚಿಕ್ಕಮಗಳೂರು‌ ಜಿಲ್ಲೆಯ ಕಡೂರು ತಾಲೂಕಿನಲ್ಲಿ ಜೆಡಿಎಸ್​ಗೆ ವೈಎಸ್​ವಿ ದತ್ತ ಗುಡ್ ಬೈ ಹೇಳ್ತಾರೆ ಎಂಬ ಮಾತುಗಳು ಕೇಳಿಬಂದಿದ್ದು . ಜೆಡಿಎಸ್​ ಬಿಟ್ಟು ಕಾಂಗ್ರೆಸ್​ ಸೇರಲಿದ್ದಾರೆ ಎಂಬ ಮಾತುಗಳು ಹರಿದಾಡುತಿತ್ತು ಅದಲ್ಲದೇ . ಎಪಿಎಂಸಿ ಮಾಜಿ ಅಧ್ಯಕ್ಷ, ದತ್ತರ ಆಪ್ತರ ಆಡಿಯೋ ಒಂದು ವೈರಲ್ ಆಗಿದ್ದು ಇದರಲ್ಲಿ ಪಕ್ಷ ಬಿಡುವ ಬಗ್ಗೆ ಸಂಭಾಷಣೆ ಆಗಿದೆ ಎನ್ನಲಾಗಿತ್ತು ಅದಕ್ಕೆ ಪುಷ್ಠಿ ನೀಡುವಂತೆ ಡಿ 17 ಬೆಳ್ತಂಗಡಿಯಲ್ಲಿ ನಡೆದ ಮಾಜಿ ಶಾಸಕ ವಸಂತ ಬಂಗೇರ ಅವರ ಜೀವನಾಧರಿತ ವಸಂತ ವಿನ್ಯಾಸ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯನವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೇ ತಾನು ಕಾಂಗ್ರೆಸ್ ಸೇರುವುದು ಖಂಡಿತ ಎಂಬ ಬಗ್ಗೆ ತನ್ನ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ವೈಎಸ್ ವಿ ದತ್ತ ನಾನು ಕಾಂಗ್ರೆಸ್ ಸೇರುವ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ ನನ್ನ ಕ್ಷೇತ್ರದ ಜನತೆಯ ಅಭಿಪ್ರಾಯ ಅಭಿಮಾನಿಗಳ ಒತ್ತಡದಿಂದಾಗಿ ಕಾಂಗ್ರೆಸ್ ಸೇರುವ ಬಗ್ಗೆ ತೀರ್ಮಾನಿಸಿದ್ದೇನೆ. ಈ ಬಗ್ಗೆ ಮಾನ್ಯ ಸಿದ್ಧರಾಮಯ್ಯ ಅವರ ಗಮನಕ್ಕೆ ತರಲಾಗಿದೆ.ಬೆಳಗಾಂ ಅಧಿವೇಶನ ಮುಗಿದ ಕೂಡಲೇ ದಿನ ನಿಗದಿಗೊಳಿಸುವ ಬಗ್ಗೆ ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದ್ದಾರೆ.ಈ ಮೂಲಕ ಹಲವಾರು ದಿನಗಳಿಂದ ಹರಿದಾಡುತಿದ್ದ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

error: Content is protected !!