ಆಮಂತ್ರಣ ಪತ್ರದಲ್ಲಿ ದಾನಿಗಳ ಹೆಸರು ಹಾಕಲು ಶಾಸಕರಿಂದ ವಿರೋಧ: ಹಿಂದೂ ಧಾರ್ಮಿಕ‌ ಹಿತ ರಕ್ಷಣಾ ವೇದಿಕೆಯಿಂದ ಆರೋಪ:

 

 

ಬೆಳ್ತಂಗಡಿ: ದೇಲಂಪುರಿ ಮಹಾದೇವ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದ ವೇಳೆ ಬೆಸ್ಟ್ ಫೌಂಡೇಷನ್ ಸ್ಥಾಪಕಾಧ್ಯಕ್ಷ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಳಿ ಸಹಾಯ ಕೇಳಲು ಹೋದಾಗ ಅವರು ಸಹಾಯದ ಭರವಸೆ ನೀಡಿದ್ದರು ಆದರೆ ಶಾಸಕ ಹರೀಶ್ ಪೂಂಜಾರವರಿಗೆ ಈ ವಿಷಯ ತಿಳಿದು ರಕ್ಷಿತ್ ಶಿವಾರಂ ಅವರ ಸಹಾಯ ಕೇಳೋದ ಬೇಡ , ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಹಾಕೋದು ಬೇಡ ಎಂದು ಹೇಳಿದ್ದಾರೆ ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹಿಂದೂ ಧಾರ್ಮಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಯರಾಮ್ ಶೆಟ್ಟಿ ಹೇಳಿದರು ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಇಲ್ಲಿ ತನಕ ದೇವಸ್ಥಾನದ ವಿಚಾರದಲ್ಲಿ ಯಾವ ಶಾಸಕರು ಈ ರೀತಿ ರಾಜಕೀಯ ಮಾಡಿಲ್ಲ. ಇದು ನ್ಯಾಯ ಅಲ್ಲ. ಈ ವಿಚಾರದ ಬಗ್ಗೆ ಕಾರ್ಯಾಂಗಕ್ಕೆ , ಶಾಸಕಾಂಗಕ್ಕೆ, ನ್ಯಾಯಾಂಗಕ್ಕೆ ದೂರು ನೀಡಲಾಗದೆ ಪ್ರಜಾಪ್ರಭುತ್ವದ ನಾಲ್ಕನೆ ಕಂಬ ಆಗಿರುವ ಮಾದ್ಯಮದ ಮುಂದೆ ಹೇಳಿಕೊಂಡಿದ್ದೇವೆ. ಶಾಸಕರ ಈ ಮಾತು ನಮಗೆ ತುಂಬಾ ಬೇಸರವನ್ನು ತಂದಿದೆ. ಈ ಹಿಂದೆಯೂ ಇಂತಹ ಘಟನೆಗಳಾಗಿದೆ. ಮುಂದೆ ಇಂತಹ ಘಟನೆ ನಡೆಯಬಾರದು ಎಂದರು.
ಇದೇ ವೇಳೆ ಮಾತನಾಡಿದ ಹಿಂದೂ ಧಾರ್ಮಿಕ ಹಿತರಕ್ಷಣೆ ವೇದಿಕೆಯ ಕೋಶಾಧಿಕಾರಿ ರಮೇಶ್ ಪೂಜಾರಿಯವರು ವೇಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಬ್ರಹ್ಮಕಲಶೋತ್ಸವ ನಡೆಯಲಿಕ್ಕಿದೆ. ಅಲ್ಲಿಯೂ ಪೂರ್ವಭಾವಿ ಸಭೆಯಾಗಿದ್ದು ಎಲ್ಲಾ ಬಿಜೆಪಿ ಕಾರ್ಯಕರ್ತರನ್ನೇ ಕರೆ ತಂದು ಬಿಜೆಪಿಯ ಬೂತ್ ಕಮಿಟಿ ಮಾಡಿದ ಹಾಗೆ ಸಮಿತಿ ರಚನೆ ಮಾಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಧಾರ್ಮಿಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಉಪಾಧ್ಯಕ್ಷ ದೇಜಪ್ಪ ಶೆಟ್ಟಿ, ಸತೀಶ್ ಹೆಗ್ಡೆ, ಸತೀಶ್ ಬಜಿರೆ, ಅರವಿಂದ್ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!