ಕಾಶಿಪಟ್ನ ಬಳಿ ರಿಕ್ಷಾ ದ್ವಿಚಕ್ರ ವಾಹನ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು:

 

 

 

 

ಬೆಳ್ತಂಗಡಿ:  ರಿಕ್ಷಾವೊಂದು‌ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕಾಶಿಪಟ್ಣ ಎಂಬಲ್ಲಿ ಇಂದು  ನಡೆದಿದೆ.ಮೃತ ವ್ಯಕ್ತಿಯನ್ನು
ನಾರಾವಿ ಗ್ರಾಮದ ಅಂಬಡ  ನಿವಾಸಿ  ಕೃಷಿಕ‌ ನಿತ್ಯಾನಂದ ಪೂಜಾರಿ ( 52) ಎಂದು ಗುರುತಿಸಲಾಗಿದೆ.ಅವರು ಇಂದು   ಸಂಜೆ 5.30ರ ಸುಮಾರಿಗೆ  ಹೊಸಂಗಡಿಯ ಬಡಕೋಡಿಯಲ್ಲಿರುವ  ತಾಯಿ ಮನೆಯಿಂದ ತನ್ನ ಮನೆಗೆ ಹಿಂದಿರುಗುತಿದ್ದ ವೇಳೆ ಕಾಶಿಪಟ್ಣ ಮಸೀದಿ ಬಳಿ ರಿಕ್ಷಾವೊಂದು ಇವರು ಚಲಾಯಿಸುತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಡಿಕ್ಕಿ ಹೊಡೆದ ರಭಸಕ್ಕೆ ಅವರು  ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಅಂಬುಲೆನ್ಸ್ ನಲ್ಲಿ  ಆಸ್ಪತ್ರೆಗೆ  ಸಾಗಿಸುವ ಸಂದರ್ಭ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಮೃತ ದೇಹ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

error: Content is protected !!