ಜಾನುವಾರುಗಳಿಗೆ ಚರ್ಮಗಂಟು ರೋಗ: ಸೋಂಕು ಇರುವ ಮನೆಗಳ ಸುತ್ತಮುತ್ತ ತಕ್ಷಣದಿಂದಲೇ ಫಾಗಿಂಗ್: ಶಾಸಕ ಹರೀಶ್ ಪೂಂಜ: ತಕ್ಷಣ ಕ್ರಮ ಕೈಗೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ:

 

 

ಬೆಳ್ತಂಗಡಿ: ಚರ್ಮಗಂಟು ರೋಗ ತಾಲೂಕಿನಾದ್ಯಂತ ಕಂಡು ಬರುತ್ತಿರುವ ಅತೀ ಶೀಘ್ರವಾಗಿ ಜಾನುವಾರುಗಳಿಗೆ ಹರಡುತ್ತಿರುವ ಸಾಂಕ್ರಾಮಿಕ ರೋಗವಾಗಿದ್ದು ಇದನ್ನು ತಡೆಗಟ್ಟುವಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಕಾರಿಗಳು ಕಾರ್ಯಪೃವೃತ್ತರಾಗಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಲಾಯಿಲದ ಸಂಭ್ರಮ ಕಲಾಭವನದಲ್ಲಿ ಚರ್ಮಗಂಟು ರೋಗ ನಿಯಂತ್ರಣ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ತಾಲೂಕಿನಲ್ಲಿಯೂ ಸುಮಾರು 335 ಕ್ಕೂ ಅಧಿಕ ಜಾನುವಾರುಗಳಿಗೆ ಸೋಂಕು ತಗುಲಿದ್ದು 4 ಜಾನುವಾರುಗಳು ಮೃತಪಟ್ಟಿವೆ  .ಈ ಬಗ್ಗೆ ಇಲಾಖೆಗಳು ನಿಯಂತ್ರಣದ ಬಗ್ಗೆ ಇನ್ನಷ್ಟು ಹೆಚ್ಚಿನ ಕ್ರಮಕೈಗೊಳ್ಳಬೇಕು ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಸೊಳ್ಳೆ ಉಣುಗು ಮೂಲಕ ಗಾಳಿಯಲ್ಲಿ ಅತೀ ಹೆಚ್ಚು ಹರಡುವುದರಿಂದ ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಂಡು ಬಂದ ಮನೆಗಳ ಕೊಟ್ಟಿಗೆ ಹಾಗೂ ಸುತ್ತಮುತ್ತ ಪಿಡಿಒಗಳು ಫಾಗಿಂಗ್ ಮಾಡುವ ವ್ಯವಸ್ಥೆಯನ್ನು ಪಶು ಸಂಗೋಪನಾ ಇಲಾಖೆಯ ಸಹಕಾರದಲ್ಲಿ ಮಾಡುವ ಮೂಲಕ ಹತ್ತಿರದ ಮನೆಗಳ ಜಾನುವಾರುಗಳಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದರು.ಅದೇ ರೀತಿ ಪಶು ಸಂಗೋಪನಾ ಇಲಾಖೆಗೆ ಹೆಚ್ಚಿನ ವಾಹನಗಳ ಅವಶ್ಯಕತೆ ಕಂಡು ಬಂದಲ್ಲಿ ತಕ್ಷಣ ತಹಶೀಲ್ದಾರ್ ಅವರು ಕ್ರಮ ಕೈಗೊಳ್ಳಬೇಕು. ಎಲ್ಲಿಯಾದರೂ ಸೋಂಕು ಕಂಡುಬಂದಲ್ಲಿ ತಕ್ಷಣ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಿ ಚಿಕಿತ್ಸೆ ಕೊಡಿಸಬೇಕು.

ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ದನ ಕರುಗಳಿಗೆ ಹಾಗೂ ಎತ್ತು ಕೋಣಗಳಿಗೆ ಪರಿಹಾರ   ನೀಡುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ ಎಂದರು.ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು..

error: Content is protected !!