95 ವರ್ಷಗಳ ಭವ್ಯ ಸಂಸತ್‌ನಲ್ಲಿ ಕೊನೆಯ ಅಧಿವೇಶನ ಆರಂಭ..!: ಚಳಿಗಾಲದ ಅಧಿವೇಶನವೇ ವಿದಾಯದ ಅಧಿವೇಶನವಾಗುವ ಸಾಧ್ಯತೆ..!?: ಹಳೆಯ ಸಂಸತ್ ಭವನ ಮುಂದೇನಾಗಲಿದೆ..?

95 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಭವ್ಯ ಸಂಸತ್‌ನಲ್ಲಿ ಇಂದಿನಿಂದ ಆರಂಭವಾದ ಚಳಿಗಾಲದ ಅಧಿವೇಶನವೇ ಕೊನೆಯ ಅಧಿವೇಶನ ಆಗಲಿದೆ ಎಂದು ಹೇಳಲಾಗುತ್ತಿದೆ.

ಈಗಿರುವ ಸಂಸತ್ ಭವನ ಕಟ್ಟಡವು ಮಿಟೌಲಿಯ ಚೌಸತ್ ಯೋಗಿನಿ ದೇವಸ್ಥಾನದಿಂದ ಸ್ಫೂರ್ತಿ ಪಡೆದಿದ್ದು, 1927ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲಿ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ಗಾಗಿ ಈ ಭವ್ಯ ಕಟ್ಟಡವನ್ನು ನಿರ್ಮಿಸಲಾಗಿತ್ತು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಅಂತ್ಯದ ಬಳಿಕ, ಇದನ್ನು ಭಾರತದ ಸಂವಿಧಾನ ಸಭೆಯು ಸ್ವಾಧೀನಪಡಿಸಿಕೊಂಡಿತು.

95 ವರ್ಷಗಳಷ್ಟು ಹಳೆಯದಾದ ಈ ಕಟ್ಟಡದಲ್ಲಿ ಸ್ಥಳದ ಅಸಮರ್ಪಕತೆಯಿದೆ. ಹೀಗಾಗಿ 2010ರ ದಶಕದಲ್ಲಿ, ಸೆಂಟ್ರಲ್ ವಿಸ್ಟಾವನ್ನು ಪುನರುಜ್ಜೀವನಗೊಳಿಸಲು ಮತ್ತು ಹಲವಾರು ಆಡಳಿತ ಕಟ್ಟಡಗಳನ್ನು ಪುನಃ ನಿರ್ಮಿಸಲು ಅಥವಾ ಸ್ಥಳಾಂತರಿಸಲು ಪ್ರಸ್ತಾಪವನ್ನು ಪರಿಚಯಿಸಲಾಯಿತು.

ಸಧ್ಯ ಭಾರತ ತನ್ನ ಸಂಸತ್ತಿನ ಸದಸ್ಯತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದರಿಂದ, 1,350 ಸದಸ್ಯರ ಹೆಚ್ಚಿನ ಆಸನ ಸಾಮರ್ಥ್ಯದೊಂದಿಗೆ ಹೊಸ ಸಂಸತ್ತು ಸೆಂಟ್ರಲ್ ವಿಸ್ಟಾ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಅಧಿವೇಶನಗಳು ನೂತನವಾಗಿ ನಿರ್ಮಿಸಲಾಗಿರುವ ಸಂಸತ್‌ನಲ್ಲಿ ನಡೆಯಲಿವೆ. ಮುಂದಿನ ವರ್ಷದ ಬಜೆಟ್ ಅಧಿವೇಶನವನ್ನೂ ಅಲ್ಲೇ ನಡೆಸಲು ಸರ್ಕಾರ ಮುಂದಾಗಿದೆ. ಹಳೆಯ ಸಂಸತ್ ಭವನವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.

error: Content is protected !!