ಆರೋಗ್ಯದಲ್ಲಿ ಏರುಪೇರು ಲಾಯಿಲದ ಯುವಕ ನಿಧನ :

 

 

 

ಬೆಳ್ತಂಗಡಿ: ಆರೋಗ್ಯದಲ್ಲಿ ಏರುಪೇರಾಗಿ ಯುವಕ ಸಾವನ್ನಪ್ಪಿದ ಘಟನೆ ಲಾಯಿಲದಲ್ಲಿ ನಡೆದಿದೆ.

ಲಾಯಿಲ ಗ್ರಾಮದ ಅಮನಂಗಡಿ ಎಂಬಲ್ಲಿಯ ದಿ. ಲೂವಿಸ್ ಪಿಂಟೋ ಅವರ ಪುತ್ರ ಸುನಿಲ್ ರೋಶನ್ ಪಿಂಟೋ (39) ಅವರಿಗೆ ಇಂದು ಬೆಳಗ್ಗೆ ಆರೋಗ್ಯದ ಸಮಸ್ಯೆ ಕಂಡು ಬಂದಿದ್ದು ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರೆ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.‌ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ತಂದೆಯ ಮರಣ ನಂತರ    ಮನೆಯಲ್ಲಿ ಕೃಷಿಯೊಂದಿಗೆ ಹೈನುಗಾರಿಕೆ ನಡೆಸುತಿದ್ದರು.ಎಲ್ಲರೊಂದಿಗೆ ಆತ್ಮೀಯತೆಯೊಂದಿಗಿದ್ದ ಇವರು  ತಾಯಿ ಹಾಗೂ ಪತ್ನಿ ಸೇರಿದಂತೆ ಬಂಧು ವರ್ಗದವರನ್ನು ಅಗಲಿದ್ದಾರೆ.

error: Content is protected !!