ಬೆಳ್ತಂಗಡಿ : ಗೂಡ್ಸ್ ವಾಹನಕ್ಕೆ ಲಾರಿ ಡಿಕ್ಕಿ ಮೂವರಿಗೆ ಗಾಯ: ಲಾಯಿಲದ ಕಾಶಿಬೆಟ್ಟು ಬಳಿ ನಡೆದ ಘಟನೆ: ಸ್ವಲ್ಪ ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯ:

 

 

ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿ ಹಾಸನದಿಂದ ಕಾರ್ಕಳಕ್ಕೆ ಮೋರಿಯನ್ನು ಸಾಗಿಸುತ್ತಿದ್ದ ಟ್ರಕ್ ವಾಹನಕ್ಕೆ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗೂಡ್ಸ್ ವಾಹನಕ್ಕೆ ಹಾನಿಯಾಗಿದ್ದು ಚಾಲಕ ವಿಶ್ವನಾಥ್ ಗೌಡ ಸೇರಿದಂತೆ ಅವರ ಪತ್ನಿ ವಸಂತಿ (35) ಹಾಗೂ ಪತ್ನಿಯ ತಂಗಿ ಕ್ರತಿಕಾ (18) ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಿಂದ ಸುಮಾರು ತಾಸು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ವಾಹನ ಸವಾರರಿಗೆ ತೊಂದರೆ ಉಂಟಾಯಿತು . ತ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಅಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.

error: Content is protected !!