ಸುರತ್ಕಲ್ ಟೋಲ್​​ಗೇಟ್ ರದ್ದು: ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ :

 

 

ಮಂಗಳೂರು: ಸುರತ್ಕಲ್​​ ಟೋಲ್​​ಗೇಟ್ ರದ್ದು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸುರತ್ಕಲ್ ಎನ್​ಐಟಿಕೆ ಟೋಲ್​​ಗೇಟ್ ರದ್ದುಪಡಿಸುವಂತೆ ಟೋಲ್​​ಗೇಟ್ ವಿರೋಧಿ ಹೋರಾಟ ಸಮಿತಿ ಅಕ್ಟೋಬರ್ 28 ರಿಂದ ಅನಿರ್ಧಿಷ್ಠಾವಧಿ ಹಗಲು ರಾತ್ರಿ ಧರಣಿ ನಡೆಸುತ್ತಿದೆ.

ಇದಕ್ಕೂ ಮೊದಲು ಸುರತ್ಕಲ್ ಎನ್​ಐಟಿಕೆಗೆ ಹೋರಾಟಗಾರರು ಮುತ್ತಿಗೆ ಹಾಕಿ ಟೋಲ್ ಸಂಗ್ರಹವನ್ನು ಕೆಲಹೊತ್ತು ತಡೆದು ತಮ್ಮ ಆಕ್ರೋಶ ಹೊರಹಾಕಿದ್ದರು.‌ ಇದೀಗ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ. ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೆ ಕೇಂದ್ರ ಸಚಿವರು ನೀಡಿದ್ದರು. ಅದರಂತೆ ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ಬರೆದಿದ್ದಾರೆ.

error: Content is protected !!