ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದರೂ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಿಲ್ಲ: ಜೈಭೀಮ್ ಜನಜಾಗೃತಿ ಜಾಥಾದಲ್ಲಿ ಎಂ.ಗೋಪಿನಾಥ್

 

ಬೆಳ್ತಂಗಡಿ : ಸಂವಿಧಾನವೆಂದರೆ ದೇಶದ ಜನರಿಗೆ ಬದುಕಲು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟು ಹೋದ ಹಕ್ಕುಪತ್ರ , ಇಂದು ಈ ಸಂವಿಧಾನವೇ ಅಪಾಯದಲ್ಲಿದೆ , ನಮ್ಮನ್ನಾಳುವ ಸರ್ಕಾರಗಳು ಸಂವಿಧಾನ ಜಾರಿ ಆಗಿದೆ ಎಂದು ಹೇಳುತ್ತಿವೆ ಆದರೆ
ಸಂವಿಧಾನವು ಸಂಪೂರ್ಣವಾಗಿ ಜಾರಿಯಾಗಿಲ್ಲ ,
ಕೇವಲ 15% ಇರುವಂಥ ಕೆಲವೇ ಜನರ ಹಿತರಕ್ಷಣೆಗಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಸಂವಿಧಾನ ಜಾರಿಯಾಗಿದೆ ಎಂದು ಬಹುಜನ ಸಮಾಜ ಪಾರ್ಟಿ(ಬಿ ಎಸ್ ಪಿ ) ಕರ್ನಾಟಕ ರಾಜ್ಯ ಸಂಯೋಜಕರು ಎಂ.ಗೋಪಿನಾಥ್ ಹೇಳಿದರು.

ಬಹುಜನ ಸಮಾಜ ಪಕ್ಷ ಸಂವಿಧಾನದ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ವ್ಯಾಪ್ತಿ ಸಂಚರಿಸುತ್ತಿರುವ ಜೈಭೀಮ್ ಜನಜಾಗೃತಿ ಜಾಥಾ ದ ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಬುಧವಾರ ಸಂಜೆ ಪ್ರವೇಶಿಸಿದ್ದು ಬೆಳ್ತಂಗಡಿಯಲ್ಲಿ ನಡೆದ ಬಹಿರಂಗ ಸಭೆಯನ್ನು ಜಾಥಾವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅಂಬೇಡ್ಕರ್ ಸಂವಿಧಾನ ಸಮರ್ಪಿಸುವ ಸಂದರ್ಭ ಆಶಿಸಿದ್ದ ಪ್ರಕಾರ ಸಂವಿಧಾನವು ಯಥಾವತ್ತಾಗಿ ಜಾರಿಯಾದಲ್ಲಿ ಕೇವಲ ಇಪ್ಪತ್ತು ವರ್ಪದಲ್ಲಿ ದೇಶದಲ್ಲಿ ಬಡತನ, ಹಸಿವು, ನಿರುದ್ಯೋಗ, ಅನಕ್ಷರತೆ, ಅಪೌಷ್ಠಿಕತೆ, ಜಾತಿ ಗಲಭೆ, ಕೋಮು ಗಲಭೆಗಳು ಕೊನೆಯಾಗಬೇಕಿತ್ತು, ಕೊಲೆ, ಅತ್ಯಾಚಾರ, ಹಿಂಸಾಚಾರ ಇದೆಲ್ಲವೂ ದೇಶದ ಜನರನ್ನು ಕಾಡುತ್ತಿವೆ
ಸಂವಿಧಾನವು ಸಂಪೂರ್ಣವಾಗಿ ಜಾರಿಯಾಗದಿರುವುದೇ
ಈ ಎಲ್ಲಾ ಗಂಡಾಂತರಗಳಿಗೆ ಕಾರಣವಾಗಿವೆ ಇದಕ್ಕಾಗಿಯೇ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಲಿ ಎಂಬ ಆಗ್ರಹವನ್ನು ಆಳುವ ಸರಕಾರಗಳಿಗೆ ಬಿ ಎಸ್ ಪಿ ಮುಂದಿಡುತ್ತಿದೆ ಎಂದು ಎಂದು ಗೋಪಿನಾಥ್ ತಿಳಿಸಿದರು.

ಬಿಎಸ್ಪಿ ದ.ಕ. ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಪಿ.ಎಸ್.ಶ್ರೀನಿವಾಸ್ ಪದಾಧಿಕಾರಿಗಳು, ಪಕ್ಷದ ನೂರಾರು ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಿದ ಜನಜಾಗೃತಿ ಜಾಥಾವನ್ನು ಉಜಿರೆಯಲ್ಲಿ ಸ್ವಾಗತಿಸಿ
ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಕರೆತಂದರು.
ಸಭೆಯಲ್ಲಿ ‌‌ ಪಂಚರಾಜ್ಯಗಳ ಉಸ್ತುವಾರಿ ನಿತಿನ್ ಸಿಂಗ್ ರಾಜ್ಯ ಕಾರ್ಯದರ್ಶಿ ಕಾಂತಪ್ಪ ಆಲಂಗಾರ್, ಬಿಎಸ್ಪಿ ದ.ಕ. ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು ಮಾತನಾಡಿದರು.

ಸಭೆಯಲ್ಲಿ ಮಂಜುಬಕ್ಕಿ ನೇತೃತ್ವದ ಕಲಾ ತಂಡದಿಂದ ಬಹುಜನ ಗೀತೆಗಳನ್ನು ಹಾಡ‌‌ಲಾಯಿತು.
ಈ ಸಂದರ್ಭದಲ್ಲಿ ಬಿಎಸ್ಪಿ ಕರ್ನಾಟಕ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕಿರ್ ಹುಸೇನ್, ರಾಜ್ಯ ಕಾರ್ಯದರ್ಶಿ ವೇಳಾಯುಧನ್ , ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಡಿ, ಬಿಎಸ್ಪಿ ದ.ಕ. ಜಿಲ್ಲಾ ಉಸ್ತುವಾರಿ ಗೋಪಾಲ್ ಮುತ್ತೂರು, ಜಿಲ್ಲಾ ಸಂಯೋಜಕ ನಾರಾಯಣ್ ಭೋದ್, ಬಿಎಸ್ಪಿ ದ.ಕ. ಜಿಲ್ಲಾ ಖಜಾಂಚಿ ವಿಮಲಾ ಕೆ., ಪೇಜಾವರ ಬಿಎಸ್ಪಿ ದ.ಕ.ಜಿಲ್ಲಾ ಕಚೇರಿ ಕಾರ್ಯದರ್ಶಿ ಶಿವರಾಮ್, ಬಿಎಸ್ಪಿ ಮಂಗಳೂರು ಉತ್ತರ ಉಸ್ತುವಾರಿ ಲೋಕೇಶ್ ಮುತ್ತೂರು, ಪುತ್ತೂರು ತಾಲೂಕು ಅಧ್ಯಕ್ಷ ನಿಶಾಂತ್, ಬಿಎಸ್ಪಿ ಮಂಗಳೂರು ಉತ್ತರ ಅಧ್ಯಕ್ಷ ಉಮೇಶ್ ಪಾಡ್ಯಾರು, ಬಿಎಸ್ಪಿ ಬೆಳ್ತಂಗಡಿ ಉಸ್ತುವಾರಿ ಸಂಜೀವ ನೀರಾಡಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪಿ.ಎಸ್. ಶ್ರೀನಿವಾಸ್, ಬೆಳ್ತಂಗಡಿ ತಾಲೂಕು ಸಂಯೋಜಕರು ಸಂಜೀವ, ಮೂಡುಬಿದಿರೆ ನಗರ ಉಸ್ತುವಾರಿ ವಿಠಲ್ , ಇತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.

ಬಿಎಸ್ಪಿ ದ ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಮುತ್ತೂರು ಕಾರ್ಯಕ್ರಮ ನಿರೂಪಿಸಿದರು,
ತಾಲೂಕು ಬಿಎಸ್ಪಿ ಅಧ್ಯಕ್ಷ ಪಿ.ಎಸ್.ಶ್ರೀನಿವಾಸ್ ವಂದಿಸಿದರು.

error: Content is protected !!