ಕೇದಾರ್​ನಾಥ್​ ಬಳಿ ಹೆಲಿಕಾಪ್ಟರ್ ಪತನ: 6 ಮಂದಿ ಸ್ಥಳದಲ್ಲೇ ಸಾವು ಇಬ್ಬರಿಗೆ ಗಾಯ

 

 

ದೆಹಲಿ: ಕೇದಾರ್​ನಾಥ್​ ಬಳಿ ಹೆಲಿಕಾಪ್ಟರ್ ಪತನಗೊಂಡು 6 ಜನ ಭಕ್ತರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಇಂದು ಸಂಭವಿಸಿದೆ. ಕೇದಾರನಾಥ್ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿ ಈ ದುರಂತ ನಡೆದಿದೆ.ಹೆಲಿಕಾಪ್ಟರ್​ನಲ್ಲಿ 8 ಜನರು ಪ್ರಯಾಣಿಸುತ್ತಿದ್ದರು. ಈ ಪೈಕಿ 6 ಜನ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಘಟನಾ ಸ್ಥಳಕ್ಕೆ ಎನ್​ಡಿಆರ್​ಎಫ್​, ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್​ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಮುಖ್ಯಮಂತ್ರಿಗಳ ವಿಶೇಷ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

error: Content is protected !!