ವಿಟ್ಲ ಅಂಗಡಿ ಶಟರ್ ಮೇಲೆ ಆತಂಕಕಾರಿ ನೇಮ್ ಜಿಹಾದ್ ಬರಹ:

 

 

 

 

 

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಅಂಗಡಿಯೊಂದರ ಶಟರ್​ನಲ್ಲಿ ಯಾರೋ ಕಿಡಿಗೇಡಿಗಳು ನೇಮ್ ಜಿಹಾದ್ ಎಂಬ ಬರಹವನ್ನು ಹಾಕಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನೈನಾಡು ಎಂಬಲ್ಲಿ ಇದೇ ರೀತಿ ಆತಂಕಕಾರಿ ಬರವಣಿಗೆಯೊಂದು ಕಂಡು ಬಂದಿತ್ತು. ಬಳಿಕ ಪುಂಜಾಲಕಟ್ಟೆ ಪೊಲೀಸ್​ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಇದುವರೆಗೂ ಖದೀಮರ ಕುರಿತು ಯಾವೊಂದು ಸುಳಿವು ಸಿಕ್ಕಿಲ್ಲ.ಈ ಬೆನ್ನಲ್ಲೇ ಬಂಟ್ವಾಳ ತಾಲೂಕಿನ ವಿಟ್ಲದ ಪೇಟೆಯ ದೀಪಕ್ ವಾಚ್ ವರ್ಕ್ಸ್​ನ ಶಟರ್ ಮೇಲೆ ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ನೇಮ್ ಜಿಹಾದ್ ಎಂದು ಬರೆದಿದ್ದು, ಮುಂಜಾನೆ ಅಂಗಡಿ ಮಾಲೀಕ ಬಾಗಿಲು ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಅಬ್ದುಲ್ ಎಂಬುವರಿಗೆ ಸೇರಿದ ಅಂಗಡಿ ಇದಾಗಿದ್ದು, ಈ ಕುರಿತು ವಿಟ್ಲ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು ಕಂಡುಬಂದಿದೆ ಎನ್ನಲಾಗ್ತಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!