ಐಷಾರಾಮಿ ಹೋಟೆಲ್ ಕಾರ್ಯರಂಭ ಬೆಳ್ತಂಗಡಿಯ ಹಿರಿಮೆ ಹೆಚ್ಚಿಸಿದೆ:ಶಾಸಕ ಹರೀಶ್ ಪೂಂಜ: ‘ಕಾಶೀ ಪ್ಯಾಲೇಸ್’, ‘ದಿ ಓಷ್ಯನ್ ಪರ್ಲ್’ಗೆ ಭೇಟಿ ನೀಡಿ ಮೆಚ್ಚುಗೆ:

 

 

ಉಜಿರೆ: ನೂತನವಾಗಿ‌ ಲೋಕಾರ್ಪಣೆಗೊಂಡ ಉಜಿರೆಯ ‘ಕಾಶೀ ಪ್ಯಾಲೇಸ್’ ಓಷ್ಯನ್ ಪರ್ಲ್ ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪತ್ನಿ ಸ್ವೀಕೃತ ಹಾಗೂ ಮಕ್ಕಳೊಂದಿಗೆ   ಭೇಟಿ ನೀಡಿ ಶುಭ ಹಾರೈಸಿದರು.

 

ಈ ಸಂದರ್ಭದಲ್ಲಿ ಓಷ್ಯನ್ ಪರ್ಲ್ ಮಾಲೀಕರಾದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹಾಗೂ ದಿ ಓಷ್ಯನ್ ಪರ್ಲ್’ನ ಜನರಲ್ ಮ್ಯಾನೇಜರ್ ನಿತ್ಯಾನಂದ ಮೊಂಡಲ್ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು   ಬೆಳ್ತಂಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಶೀ ಪ್ಯಾಲೇಸ್ ನಲ್ಲಿ ಓಷ್ಯನ್ ಪರ್ಲ್ ಐಷಾರಾಮಿ ಹೋಟೆಲ್ ಕಾರ್ಯಾರಂಭಗೊಂಡಿರುವುದು ಬೆಳ್ತಂಗಡಿಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

 

 

ಅದ್ದಲ್ಲದೇ ಜನ ಸಾಮಾನ್ಯರೂ ಕೂಡ ಹೋಟೆಲಿಗೆ ಭೇಟಿ ನೀಡಿ ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸಬೇಕು ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶವನ್ನು ನೀಡಬೇಕು ಎಂಬ ಚಿಂತನೆಯನ್ನು ಮಾಡಿರುವ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರಿಗೆ ತಾಲೂಕಿನ ಜನತೆಯ ಪರವಾಗಿ ಶಾಸಕನ ನೆಲೆಯಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

 

 

ನವರಾತ್ರಿಯ ಸಂದರ್ಭದಲ್ಲಿ ಉತ್ತರ ಭಾರತ ಯಾತ್ರೆ ಕೈಗೊಂಡಿದ್ದರಿಂದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು‌ ಆಸಾಧ್ಯವಾಗಿತ್ತು  ಎಂದರು.ಭೇಟಿ ಸಂದರ್ಭ   ಶಾಸಕ ದಂಪತಿಗಳನ್ನು  ಹಣೆಗೆ ತಿಲಕವನ್ನಿಟ್ಟು ಸಾಂಪ್ರದಾಯದಂತೆ ನೂತನ ಹೋಟೆಲಿಗೆ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

error: Content is protected !!