ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಗಲೀಕರಣ: ಸ್ಪಷ್ಟ ಮಾಹಿತಿಗಾಗಿ ಸಭೆ, ಹಾಳಾದ ಹೆದ್ದಾರಿ ದುರಸ್ತಿಗಾಗಿ ಶಾಸಕರಿಗೆ ವರ್ತಕರ ಸಂಘದಿಂದ ಮನವಿ: ಶೀಘ್ರವೇ ಮಾಹಿತಿ ಸಭೆ,ಹಾಗೂ ಮಳೆ ಕಡಿಮೆಯಾದ ಕೂಡಲೇ ದುರಸ್ತಿ ಕಾರ್ಯ ಶಾಸಕರ ಭರವಸೆ:

 

 

ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ನಡೆದು ನವೆಂಬರ್ ತಿಂಗಳಿನಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂಬ ಮಾಹಿತಿ ಇದೆ. ಅದರೆ ಇದರ ಸರಿಯಾದ ಚಿತ್ರಣ ಇನ್ನೂ ಯಾರಿಗೂ ಸಿಕ್ಕಿಲ್ಲ ರಸ್ತೆ ಎಷ್ಟು ಅಗಲ ರಸ್ತೆ ಇದೆ ಈ ಬಗ್ಗೆ ಸಾರ್ವಜನಿಕರಿಗೆ ಉದ್ಯಮಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಗೊಂದಲ ಇದೆ. ಇದಕ್ಕಾಗಿ ಸರಿಯಾದ ಮಾಹಿತಿಗಳನ್ನು ನೀಡುವ ಉದ್ಧೇಶದಿಂದ ಸಂಸದರು ಶಾಸಕರು ಸೇರಿದಂತೆ ಅಧಿಕಾರಿಗಳನ್ನೊಳಗೊಂಡ ಸಾರ್ವಜನಿಕ ಮಾಹಿತಿ ಸಭೆಯನ್ನು ಕರೆದು ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಬೆಳ್ತಂಗಡಿ ವರ್ತಕರ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜ ಇವರಿಗೆ ಮನವಿ ಮಾಡಲಾಯಿತು. ಅದಲ್ಲದೇ ಈಗಾಗಲೇ ಹೆದ್ದಾರಿಯಲ್ಲಿ ವಾಹನ ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಇದನ್ನೂ ದುರಸ್ತಿಗೊಳಿಸುವಂತೆ ಮನವಿ ಮಾಡಲಾಯಿತು. ಈ ಬಗ್ಗೆ ಸ್ಪಂದಿಸಿದ ಶಾಸಕರು ಶೀಘ್ರವೇ ಸಭೆ ಕರೆಯಲಾಗುವುದು ಅದಕ್ಕಾಗಿ ದಿನ ನಿಗದಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಅದಲ್ಲದೇ ರಸ್ತೆ ಅಗಲೀಕರಣ ಸಂದರ್ಭ ಸ್ವಾಧೀನ ಪಡಿಸಿಕೊಂಡ ಜಾಗಕ್ಕೆ ಪರಿಹಾರದ ಮೊತ್ತ ಸಮರ್ಪಕವಾಗಿ ನೀಡುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅದೇ ರೀತಿ ಮಳೆಯಿಂದಾಗಿ ಹೆದ್ದಾರಿ ದುರಸ್ತಿ ಕೆಲಸ ತಡವಾಗಿದೆ ಇದರ ಕೆಲಸವನ್ನೂ ಮಳೆ ಕಡಿಮೆಯಾದ ಕೂಡಲೇ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪದಾಧಿಕಾರಿಗಳಾದ ಜಯಾನಂದ ಗೌಡ, ಶೀತಲ್ ಜೈನ್, ಶಶಿಧರ್ ಪೈ, ಚಿದಾನಂದ ಇಡ್ಯಾ, ರೋನಾಲ್ಡ್ ಲೋಬೋ,ಯೇಸುದಾಸ್, ಕೃಷ್ಣ ಭಟ್ ಇದ್ದರು.

error: Content is protected !!