ಮೈಸೂರು ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷನ ವಶಕ್ಕೆ ಪಡೆದ ಎನ್ಐಎ: ಸಿಸಿಬಿ ಕಛೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು:

 

ಬೆಂಗಳೂರು: ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮಹಮ್ಮದ್ ಕಲೀಮುಲ್ಲಾ ಅವರನ್ನು ಎನ್.ಐ.ಎ ತಂಡ ವಶಕ್ಕೆ ಪಡೆಯುತ್ತಿದ್ದಂತೆ, ಅಶೋಕ್ ರಸ್ತೆಯಲ್ಲಿರುವ ಸಿಸಿಬಿ ಕಚೇರಿ ಮುಂದೆ ಜಮಾಯಿಸಿದ ಪಿ​ಎಫ್​ಐ, ಎಸ್ಎಫ್ಐ ಹಾಗೂ ಕಲೀಮುಲ್ಲಾ ಬೆಂಬಲಿಗರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಲೀಮುಲ್ಲಾ ಅವರನ್ನು ಪೊಲೀಸ್ ಭದ್ರತೆಯಲ್ಲಿ ಜೀಪಿನಲ್ಲಿ ಕರೆದೊಯ್ಯುವಾಗ, ಪೊಲೀಸ್ ಜೀಪನ್ನು ಪಿಎಫ್ಐ ಕಾರ್ಯಕರ್ತರು ಅಡ್ಡ ಹಾಕಿದರು. ಕಲೀಮುಲ್ಲಾ ಅವರನ್ನು ಪೊಲೀಸರು ಬಿಗಿಭದ್ರತೆಯಲ್ಲಿ ಬೆಂಗಳೂರಿನತ್ತ ಕರೆದೊಯ್ದರು. ಈ ಬಗ್ಗೆ  ಬೆಂಗಳೂರಿನಲ್ಲಿರುವ ಎನ್.ಐ.ಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕಾರ್ಯಕರ್ತರು ತೆರಳುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

error: Content is protected !!