ಇಳಂತಿಲ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಗುರು ಜಯಂತಿ  ಕಾರ್ಯಕ್ರಮ

 

 

 

ಬೆಳ್ತಂಗಡಿ: ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ) ಇಳಂತಿಲ, ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜಯಂತಿಯು ಅಂಡೆತ್ತಡ್ಕದ ವಾಣಿಶ್ರೀ ಭಜನಾ ಮಂದಿರದಲ್ಲಿ ನಡೆಯಿತು.ಗುರು ಜಯಂತಿ ಪ್ರಯುಕ್ತ ಗುರು ಸಂದೇಶವನ್ನು ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ನೆರವೇರಿಸಿದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಘದ ಅದ್ಯಕ್ಷರಾದ ವಸಂತ ಸಾಲಿಯಾನ್ ವಹಿಸಿದ್ದರು. ಅಂಡೆತ್ತಡ್ಕ ಸ. ಉ. ಹಿ. ಪ್ರಾ ಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ ಪೂಜಾರಿ, ಕಾರ್ಯದರ್ಶಿ ಅಶೋಕ ಕೋಟ್ಯಾನ್, ಪಾಡೆಂಕಿ,ಮಹಿಳಾ ಬಿಲ್ಲವ ವೇದಿಕೆಯ ಅದ್ಯಕ್ಷರಾದ ಸವಿತಾ ಉಮೇಶ್, ಅಣ್ಣಾಜೆ ಉಪಸ್ಥಿತರಿದ್ದರು.

error: Content is protected !!