ಮಾರ್ಚ್ ತಿಂಗಳೊಳಗೆ ಮುಗೇರಡ್ಕ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಲೋಕಾರ್ಪಣೆ: ಕಾಮಗಾರಿ ವೀಕ್ಷಿಸಿ ಸಚಿವ ಗೋವಿಂದ ಕಾರಜೋಳ ಹೇಳಿಕೆ:

 

 

ಬೆಳ್ತಂಗಡಿ: ರೂ 240 ಕೋಟಿ ವೆಚ್ಚದಲ್ಲಿ ಮುಗೇರಡ್ಕದಲ್ಲಿ ಸೇತುವೆ ಸಹಿತ ಅಣೆಕಟ್ಟು ಮತ್ತು ಏತ ನೀರಾವರಿ ಯೋಜನೆಯ ಕಾಮಗಾರಿ ನಡೆಯುತಿದ್ದು . ಇಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಗ್ರಾಮದ ಬಹು ವರುಷಗಳ ಬೇಡಿಕೆಯನ್ನು ಯುವ ಶಾಸಕ ಹರೀಶ್ ಪೂಂಜ ಈಡೇರಿಸಿದ್ದಾರೆ. ಮುಂದಿನ ಮಾರ್ಚ್ ತಿಂಗಳಲ್ಲಿ ಎಲ್ಲ ಕೆಲಸಗಳು ಪೂರ್ಣಗೊ‌ಂಡು ಲೋಕಾರ್ಪಣೆಗೊಳ್ಳಲಿದೆ ಎಂದರು.

 

 

ಸಚಿವರ ಜೊತೆಗೆ ಶಾಸಕ ಹರೀಶ್ ಪೂಂಜ, ಬಂದಾರು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಕೆ, ಉಪಾಧ್ಯಕ್ಷ ಗಂಗಾಧರ ಪೂಜಾರಿ, ಸದಸ್ಯರಾದ ಶಿವಪ್ರಸಾದ್, ಮಂಜುಶ್ರೀ, ಬಾಲಕೃಷ್ಣ ಗೌಡ ಮತ್ತು ಶಿವ, ಪದ್ಮುಂಜ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ,ಪಿಡಿಒ ಮೋಹನ್ ಬಂಗೇರ, ಊರ ಪ್ರಮುಖರಾದ ಜಗದೀಶ್ ಕೊಂಬೇಡಿ, ದೇವಸ್ಯ ರಾಮಣ್ಣ ಗೌಡ, ನಿವೃತ ಎಸ್. ಐ ಬಾಬು ಗೌಡ, ಪದ್ಮುಂಜ ಸಹಕಾರಿ ಸಂಘದ ನಿರ್ದೇಶಕಿ ಶೀಲಾವತಿ ಮೊಗೆರಡ್ಕ, ಪುರಂದರ ಗೌಡ ನಾಯ್ಮಾರ್, ಕೇಶವ ಗೌಡ ಜಾಲ್ನಡೆ, ಪುರುಷೋತ್ತಮ‌ ಗೌಡ ಪುಣ್ಕೆದಡಿ, ಮನೋಹರ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!