ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ: “ತೌಳವ ಬೊಲ್ಪು” ತಂಡ ಒಮನ್ ಇವರಿಂದ ಸಮಾಜಮುಖಿ ಕಾರ್ಯ: ಮಸ್ಕತ್ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯ:

 

 

ಒಮನ್ :ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಸಂಧರ್ಭದಲ್ಲಿ “ತೌಳವ ಬೊಲ್ಪು ಒಮಾನ್” ತಂಡದ ಸದಸ್ಯರು ಅಲ್ ಸಿಫಾಹ್, ಮಸ್ಕತ್ ಇಲ್ಲಿಯ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸುವ ಮೂಲಕ ವಿಶೇಷವಾಗಿ ಆಚರಿಸಿದರು.

ತಂಡದ ಸದಸ್ಯರಾದ ಸಚಿನ್ ಶೆಟ್ಟಿ ಪೊಳಲಿ ಸ್ವಾಗತಿಸಿದರು. ಧನರಾಜ್ ಉಡುಪಿ ಕಾರ್ಯಕ್ರಮವನ್ನು ನಿರೂಪಿಸಿದರು.

 

ಲಿಖಿತ್ ಡಿ ಶೆಟ್ಟಿ ಲಾಯಿಲ ಸ್ವಾತಂತ್ರ್ಯ ಹೋರಾಟದ ಸಂಧರ್ಭ ಪ್ರಾಣ ತ್ಯಾಗ ಮಾಡಿದಂತಹ ಕ್ರಾಂತಿ ವೀರರ ಮಾಹಿತಿ ನೀಡಿದರು.  ತಂಡದ ಸದಸ್ಯರುಗಳಾದ ಪ್ರಜ್ಞಾ ಧನರಾಜ್ ಶೆಟ್ಟಿ, ಧನರಾಜ್ ಬಿ ಶೆಟ್ಟಿ ಮಂಗಳಾದೇವಿ, ಸುಶ್ಮಿತಾ ಧನರಾಜ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ರಕ್ಷಿತ್ ಶೆಟ್ಟಿ ಭರತ್ ಶೆಟ್ಟಿ, ರಜತ್ ಶೆಟ್ಟಿ, ಅಭಿಷೇಕ್ ಪೂಜಾರಿ ಮತ್ತು ಸುಧೀರ್ ಶೆಟ್ಟಿ ಇರುವೈಲು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

error: Content is protected !!