ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ: ಲಾಯಿಲ : ಪಡ್ಲಾಡಿ ಮತ್ತು ಹಂದೆವೂರು ಅಂಗನವಾಡಿಗಳಲ್ಲಿ ನೂತನ ಧ್ವಜಸ್ತಂಭ ಉದ್ಘಾಟನೆ:

 

 

ಬೆಳ್ತಂಗಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಲಾಯಿಲ ಗ್ರಾಮದ ಹಂದೆವೂರು ಮತ್ತು ಪಡ್ಲಾಡಿ ಅಂಗನವಾಡಿಗಳಲ್ಲಿ ನಿರ್ಮಾಣವಾದ ಧ್ವಜ ಸ್ತಂಭ ಉದ್ಘಾಟನೆಗೊಂಡು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

 

 

ಹಂದೆವೂರು ಅಂಗನವಾಡಿ ಕೇಂದ್ರದಲ್ಲಿ ಸ್ಥಳೀಯ ನಿವಾಸಿ ಹಿರಿಯರಾದ ರತ್ನ ಅನ್ನಡ್ಕ   ಧ್ವಜಕಟ್ಟೆಯನ್ನು ಉದ್ಘಾಟನೆಗೊಳಿಸಿ ಧ್ವಜಾರೋಹಣಗೈದರು. ಪಡ್ಲಾಡಿ ಅಂಗನವಾಡಿ ಕೇಂದ್ರದಲ್ಲಿ ಧ್ವಜಕಟ್ಟೆಯನ್ನು ಆನಂದ ಪೂಜಾರಿ ನಿನ್ನಿಕಲ್ಲು ಉದ್ಘಾಟಿಸಿ ವಿಲ್ಸನ್ ಸೋನ್ಸ್, ಧ್ವಜಾರೋಹಣಗೈದರು.  ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಪ್ರಾಸ್ತಾವಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಎರಡು ಅಂಗನವಾಡಿಗಳಿಗೆ ಧ್ವಜಸ್ತಂಭ ನಿರ್ಮಾಣದ ಯೋಚನೆಯಲ್ಲಿದ್ದಾಗ ಲಾಯಿಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಮಾಡಿದ ಮನವಿಗೆ ಸ್ಪಂದಿಸಿ ಧ್ವಜ ಸ್ತಂಭ ನೀಡಿದ್ದಾರೆ.ಅವರಿಗೆ ವಾರ್ಡಿನ ಪರವಾಗಿ ಅಭಿನಂದನೆಗಳು ಎಂದರು.

 

 

ಅದೇ ರೀತಿ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಉದ್ಘಾಟನೆ ಗೊಂಡು ಧ್ವಜಾರೋಹಣಗೊಂಡದ್ದು ನಮಗೆಲ್ಲ ಅತೀವ ಸಂತೋಷವನ್ನುಂಟು ಮಾಡಿದೆ ಎಂದರು.

 

 

ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬೋಜರಾಜ್ , ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಆರ್.ಧ್ವಜ ಕಟ್ಟೆ ನಿರ್ಮಿಸಿಕೊಟ್ಟ ಗುತ್ತಿಗೆದಾರ ಜಗನ್ನಾಥ ಶೆಟ್ಟಿ ಕರ್ನೋಡಿ, ಪಡ್ಲಾಡಿ ಅಂಗನವಾಡಿಗೆ ಧ್ವಜ ನೀಡಿದ ಯೋಗೀಶ್ ಭೀಡೆ, ಇವರನ್ನು ಹೂ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರುಗಳಾದ ಜಯಂತಿ ಅನ್ನಡ್ಕ, ಜಯಂತಿ ಎಂ.ಕೆ.ಪಡ್ಲಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಿರಿಧರ್ ಪೂಜಾರಿ, ಎಸ್ ಡಿ ಎಂ ಸಿ ಅಧ್ಯಕ್ಷ ಸೂರಪ್ಪ ಪಡ್ಲಾಡಿ, ಸಿಎ ಬ್ಯಾಂಕ್ ನಿರ್ದೆಶಕ ಪುರಂದರ ಪೂಜಾರಿ, ಅರ್ಥರ್ ಪಿಂಟೋ, ಪಡ್ಲಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ, ಅಂಬೇಡ್ಕರ್ ಭವನ ಉಸ್ತುವಾರಿ ಹರೀಶ್ ನೆನಪು, ಪಡ್ಲಾಡಿ ಶಾಲಾ ಅಧ್ಯಾಪಕರು, ಉತ್ಸಾಹಿ ಯುವಕ ಮಂಡಲದ ಸದಸ್ಯರು,ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.ಗ್ರಾ.ಪಂ ಸದಸ್ಯೆ ಜಯಂತಿ ಅನ್ನಡ್ಕ ಕೊನೆಯಲ್ಲಿ ಧನ್ಯವಾದವಿತ್ತರು.

error: Content is protected !!