ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ವರಮಹಾಲಕ್ಷ್ಮೀ ವ್ರತ ಧಾರ್ಮಿಕ ಸಭೆ

 

 

ಬೆಳ್ತಂಗಡಿ: ತಾಲೂಕು ಒಕ್ಕಲಿಗರ ಸಂಘದ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಹಾಗೂ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ (ರಿ ) ಉಜಿರೆ ಮತ್ತು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಕ್ರೆಡಿಟ್ ಸೌಹಾರ್ದ ಸಹಕಾರಿ ಸಹಕಾರದೊಂದಿಗೆ ಉಜಿರೆ ಎಸ್.ಪಿ. ಆಯಿಲ್ ಮಿಲ್ಲು ಸಭಾಂಗಣದಲ್ಲಿ ಆ.5 ರಂದು ನಡೆದ ಶ್ರೀ ವರ‌ಮಹಾಲಕ್ಷ್ಮೀ ವ್ರತ ಪೂಜೆ ನಡೆಯಿತು.

ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಾಲು ಶಾಲೆ ಶಿಕ್ಷಕಿ ವಾರಿಜಾ ಎಸ್. ಗೌಡ ಇಚ್ಚಿಲ ಉಪನ್ಯಾಸ ನೀಡಿದರು. ಮಹಿಳೆಯರೆಲ್ಲರು ಕುಟುಂಬದ ಭಾರವನ್ನು ಹೊತ್ತು ಯೋಗಕ್ಷೇಮವನ್ನು ಬಯಸುವವಳು. ಸಂಕಷ್ಟದಲ್ಲಿರುವ ಮಹಿಳೆಯರು ಸಂತೋಷದಲ್ಲಿರಲು ಸಕಲ ಸಂಪತ್ತು ಸೌಭಾಗ್ಯವನ್ನು ಶೀಘ್ರವಾಗಿ ಕರುಣಿಸಲು ಶ್ರಾವಣ ಮಾಸದ ಮೊದಲ ಶುಕ್ರವಾರ ಈ ವ್ರತಾಚರಣೆ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು.

ಮಹಿಳಾ ಸಂಘದ ಅಧ್ಯಕ್ಷೆ ಅಪರ್ಣ ಶಿವಕಾಂತ ಗೌಡ ಅಧ್ಯಕ್ಷತೆ ವಹಿಸಿದ್ದರು.

 

 

ಉಜಿರೆ ಒಕ್ಕಲಿಗ ಗೌಡರ
ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಶುಭಹಾರೈಸಿದರು.ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ರಂಜನ್ ಜಿ.ಗೌಡ, ಮಹಿಳಾ ಯುವ ವೇದಿಕೆ ಅಧ್ಯಕ್ಷೆ ಅನುಪಮಾ ಸತೀಶ್ ಗೌಡ ಉಪಸ್ಥಿತರಿದ್ದರು.

 

 

ನಿರ್ದೇಶಕಿ ಚೇತನಾ ಚಂದ್ರಶೇಖರ್ ಸ್ವಾಗತಿಸಿದರು. ಮಹಿಳಾ ವೇದಿಕೆ ಕಾರ್ಯದರ್ಶಿ ಗೀತಾ ಚಿದಾನಂದ ಗೌಡ ಪ್ರಾಸ್ತಾವಿಸಿದರು. ಒಕ್ಕಲಿಗ ಗೌಡರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಗೌಡ ಕಲ್ಲಾಜೆ ನಿರೂಪಿಸಿದರು.

error: Content is protected !!