ಜಲಸ್ಫೋಟಕ್ಕೆ ನಲುಗಿದ ಸುಬ್ರಹ್ಮಣ್ಯ : ಜಲ ಪ್ರಳಯಕ್ಕೆ ನಾಲ್ಕು ಗ್ರಾಮಗಳ ಸಂಪರ್ಕ ಕಡಿತ: ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಕಣ್ಮರೆ:

 

ಸುಬ್ರಹ್ಮಣ್ಯ: ಜಲಸ್ಫೋಟಕ್ಕೆ ಇಡೀ ಸುಬ್ರಹ್ಮಣ್ಯ ನಲುಗಿ ಹೋಗಿದೆ. ನಾಗರ ಪಂಚಮಿಯ ಸಂಭ್ರಮದಲ್ಲಿದ್ದ ಜನರು ಜಲಪ್ರಳಯದಿಂದ ಭಯಭೀತರಾಗಿದ್ದಾರೆ.ಸುಬ್ರಹ್ಮಣ್ಯ ಕುಮಾರಧಾರ ಪರ್ವತಮುಖಿಯಲ್ಲಿ ಗುಡ್ಡ ಕುಸಿತವಾಗಿ ಮನೆ ಮೇಲೆ ಬಿದ್ದು ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿ ಕಣ್ಮರೆಯಾಗಿದ್ದಾರೆ. ಕುಸುಮಧರ ಮತ್ತು ರೂಪಾಶ್ರೀ ದಂಪತಿಯ ಮಕ್ಕಳಾದ ಐದನೇ ತರಗತಿಯ ಶೃತಿ (11) ಹಾಗೂ ಒಂದನೇ ತರಗತಿಯ ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದ್ದು ಸ್ಥಳೀಯರಿಂದ ಜೆಸಿಬಿ ಮೂಲಕ ಮಣ್ಣು ತೆಗೆಯುವ ಕಾರ್ಯಚರಣೆ ಮಾಡುತಿದ್ದಾರೆ.ಅದಲ್ಲದೇ
ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಹರಿಹರ ಬಾಳುಗೋಡು, ಕೊಲ್ಲಮೊಗ್ರು ಕಲ್ಮಕಾರು,ಬಾಳುಗೋಡು ಐನಕಿದು ಗ್ರಾಮಗಳಲ್ಲಿ ಆ 01ಸೋಮವಾರ ಭಾರೀ ಮಳೆಯಾಗಿದ್ದು, ಜಲಪ್ರಳಯವೇ ಸಂಭವಿಸಿದೆ.ಮಳೆಯ ಭೀಕರತೆಗೆ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಈ ನಾಲ್ಕು ಗ್ರಾಮಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.
ನಡುಗಲ್ಲು ಮೂಲಕ ಈ ನಾಲ್ಕು ಗ್ರಾಮಗಳ ತಲುಪುವ ಙಡುಗಲ್ಲು ಹರಿಹರ ಮಾರ್ಗದ ಮಲ್ಲಾರ ಬಳಿ ದೊಡ್ಡ ಶಂಖ ಎಂಬಲ್ಲಿ ಸೇತುವೆ ಜಲಾವ್ರತಗೊಂಡು ಸಂಪರ್ಕ ಕಡಿತಗೊಂಡಿದೆ.ಇದೇ ಮಾರ್ಗದ ಮುಳುಗಡೆಗೊಂಡ ಸೇತುವೆ ಮೇಲೆ ಬೈಕ್ ನಲ್ಲಿ ತೆರಳುತಿದ್ದ ಕೊಲ್ಲಮೊಗ್ರು ಗ್ರಾಮದ ಸವಾರನ ಬೈಕ್ ನೀರು ಪಾಲಾಗಿದೆ. ಸವಾರ ಪ್ರಾಣಾಪಾಯದಿಂಧ ಪಾರಾಗಿದ್ದಾರೆ.
ಕಲ್ಮಕಾರು ಭಾಗದಿಂದ ಕೊಲ್ಲಮೊಗ್ರು ಹರಿಹರ ಮೂಲಕ ಹರಿಯುವ ನದಿ ತುಂಬಿ ಹರಿಯುತಿದ್ದು ಹರಿಹರ ಮುಖ್ಯ ಪೇಟೆ ಬಾಗಶ; ಮುಳುಗಡೆಗೊಂಡಿದೆ. ಹರಿಹರದಿಂದ ಕೊಲ್ಲಮೊಗ್ರು, ಕಲ್ಮಕಾರು ಭಾಗಕ್ಕೆ ಸಂಚರಿಸುವ ರಸ್ತೆ ಹರಿಹರ ಪೇಟೆಯಿಂದ ಮುಂದಕ್ಕೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.ಬಾಳುಗೋಡಿಗು ಸಂಪರ್ಕ ಕಡಿತವಾಗಿದೆ.. ಸುಬ್ರಹ್ಮಣ್ಯ ಮಳೆಯಾಳ ಮಾರ್ಗವಾಗಿ ಹರಿಹರ ಈ ಭಾಗದ ಗುಂಡಡ್ಕ ಸೇತುವೆ ಮುಳುಗಡೆಗೊಂಡಿದೆ. ಪಲ್ಲತ್ತಡ್ಕ ಎಂಬಲ್ಲಿ ನದಿ ದಂಡೆ ಮೇಲಿನ ಎರಡು ಮನೆಗಳು ಸಂಪೂರ್ಣ ಜಲಾವ್ರತವಾಗಿದ್ದು, ಮನೆಯೊಳಗೆ ನೀರು ನುಗ್ಗಿ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದೆ.ಬೈಕೊಂದು ಮುಳುಗಡೆಗೊಂಡಿದೆ. ನದಿ ದಂಡೆ ಮೇಲಿನ ಮನೆಗಳು ಜಲಾವೃತಗೊಂಡಿವೆ, ಕೃಷಿ ಭೂಮಿ ತೋಟಗಳಿಗೆ ನೀರು ನುಗ್ಗಿದೆ.

 

ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರ ನಿವಾಸಿ ಕೇಶವ ಭಟ್ ಕಟ್ಟರವರ ಮನೆಯ ಹಿಂಬದಿ ಗುಡ್ಡ ಕುಸಿದಿದೆ.ರಬ್ಬರ್ ಮರ ಉರುಳಿ ಬಿದ್ದಿದೆ.ಹರಿಹರ ಮುಖ್ಯ ಪೇಟೆ ಬಳಿಯ ವ್ಯಾಪಾರಸ್ಥರೋರ್ವರ ಅಂಗಡಿಗೆ ನೆರೆ ನೀರು ನುಗ್ಗಿ ದಾಸ್ತಾನಿಗೆ ಹಾನಿಯಾಗಿದೆ.ಹರಿಹರ ಪೇಟೆ ಬಾಗಶಃ ಮುಳುಗಡೆಗೊಂಡಿದೆ.
ಹರಿಹರ ಶ್ರೀ ಹರಿಹರೇಶ್ವರ ದೇವಸ್ಥಾನದ ಎದುರಿನ ಕಾಂಪೌಂಡ್ ಜರಿದು ಹಾನಿಯಾಗಿದೆ..ಬಾಳುಗೋಡು ಕಟ್ಟೆಮನೆ ದಾಮೋದರ ಎಂಬವರ ಮನೆ ಹಿಂಬದಿ ಜರಿದು ಬಿದ್ದಿದೆ. ಹರಿಗರ ಎಲ್ಲಪಡ್ಕ ನಿವಾಸಿ ಮಹಾಲಿಂಗ ಕೆರೆಕ್ಕೋಡಿ ಮನೆ ಹಿಂಬದಿ ಜರಿದು ಬಿದ್ದು ಹಾನಿಯಾಗಿದೆ. ಹರಿಹರ ಅಂಞನ ನಿವಾಸಿ ವಿಜಯ ಅಂಞಣ, ಗಣೇಶ ಅಂಞಣ ಅವರ ಮನೆ ಬಳಿ ಭೂಕುಸಿತವಾಗಿದೆ. ಐನಕಿದು ಗ್ರಾಮದ ದೇವಸ್ಥಾನ ಪಕ್ಕದ ನಿವಾಸಿ ಕುಸುಮಾಧರ ಎಂಬವರ ಮನೆ ಸಂಪೂರ್ಣ ಮುಳುಗಿದೆ. ಈ ಭಾಗದ. ಹಲವೆಡೆ ಅಲ್ಲಲ್ಲಿ ಭೂಕುಸಿತವಾಗಿದೆ.
ಹರಿಹರದ ಪಲ್ಲತ್ತಡ್ಕ ನಿವಾಸಿ ಯೊಗೀಶ್ ಕುಕ್ಕುಂದ್ರಡ್ಕ ಅವರಿಗೆ ಸೇರಿದ 500 ತೆಂಗಿನಕಾಯಿ ನೀರಿನಲ್ಲಿ ಕೊಚ್ಚಿಹೋಗಿದೆ.

ಹರಿಹರ ದೇಗುಲದಲ್ಲಿ ಪ್ರಾರ್ಥನೆ

ಇತಿಹಾಸದಲ್ಲಿ ಈ ಪ್ರಮಾಣದಲ್ಲಿ ಇದೆ ಮೊದಲ ಭಾರಿಗೆ ಈ ಪ್ರಮಾಣದಲ್ಲಿ ಮಳೆಯಾಗಿದ್ದು, ದೊಡ್ಡ ಪ್ರಮಾಣದ ನೆರೆ ಉಕ್ಕಿ ಹರಿದಿದೆ. ಈ ಬಾಗದಲ್ಲಿ ನೆರೆ ಉಕ್ಕಿ ಅಪಾರ ಹಾನಿ ಹಾಗೂ ಭೀತಿ ಸ್ರಷ್ಠಿಗೊಂಡ ಹಾಗೂ ಮಳೆ ಕಡಿಮೆಯಾಗದೆ ವ್ಯಾಪಾಕ ಸುರಿದು ಧಾರಾಕಾರ ಮಳೆ ಮುಂದುವರೆದ ಹಿನ್ನಲೆಯಲ್ಲಿ ಪುರಾತನ ಶ್ರೀ ಹರಿಹರೇಶ್ವರ ದೆಗುಲದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರು ಕೂಜುಗೋಡು ನೇತ್ರತ್ವದಲ್ಲಿ ಪ್ರದಾನ ಅರ್ಚಕ ಸುಬ್ರಹ್ಮಣ್ಯ ಭಟ್ ದೇಗುಲದಲ್ಲಿ ರಾತ್ರಿ ಪೂಜೆ ವೇಳೆ ವಿಶೇಷ ಪ್ರಾರ್ಥನೆ ಮಾಡಿ. ಶಾಂತಿ ಹಾಗೂ ಹೆಚ್ಚಿನ ಪ್ರಾಕ್ರತಿಕ ವಿಕೋಫ ಸಂಭವಿಸದೆ ಪ್ರಾರ್ಥನೆ ಸಲ್ಲಿಸಲಾಯಿತು.

ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ.

ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.
ಈ ಭಾಗದಲ್ಲಿ ಮುಂಜಾಗ್ರತ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಪ್ ತಂಡವನ್ನು ಆ ಭಾಗಕ್ಕೆ ಈಗಾಗಲೆ ಕಳುಹಿಸಿಕೊಡಲಾಗುತ್ತಿದೆ.ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ ಗಮನಹರಿಸಬೇಕು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ಸಾರೆ.

error: Content is protected !!