ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತಡೆಯುಂಟಾಯಿತು.ಚಾರ್ಮಾಡಿ ಘಾಟಿಯ 10 ನೇ ತಿರುವಿನಲ್ಲಿ ಜು 19 ಮಂಗಳವಾರ ರಾತ್ರಿ ಸುಮಾರು 8.30 ರ ಸುಮಾರಿಗೆ ಇಂಧನ ತುಂಬಿದ ಟ್ಯಾಂಕರ್ ತಾಂತ್ರಿಕ ದೋಷದಿಂದ ಮಾರ್ಗ ಮದ್ಯೆ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಬೆಂಗಳೂರು ಸೇರಿಂತೆ ಇನ್ನಿತರ ಕಡೆಗಳಿಗೆ ಹೋಗುವ ಬಸ್ಸು ಹಾಗೂ ಇತರ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಈ ಬಗ್ಗೆ ಮಾಹಿತಿ ಪಡೆದ ಹೊಯ್ಸಳದ ಪಿಎಸ್ ವೆಂಕಪ್ಪ ಹಾಗೂ ಬಸವರಾಜ್ ಕೊಟ್ಟಿಗೆ ಹಾರ ಹಾಗೂ ಚಾರ್ಮಾಡಿ ಗೇಟ್ ಬಳಿ ವಾಹನಗಳನ್ನು ನಿಯಂತ್ರಿಸಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಸಂಚಾರಿ ಠಾಣೆಯ ಪಿಎಸ್ ಐ ಓಡಿಯಪ್ಪ ಶಿವರಾಮ್ ರೈ, ಕುಮಾರ್ ಅವರು ಕ್ರೇನ್ ತರಿಸಿ ಟ್ಯಾಂಕರ್ ತೆರವುಗೊಳಿಸಿ ಬೆಳಿಗ್ಗೆ 5 ಗಂಟೆಗೆ ಬಸ್ಸ್ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈಗಾಗಲೇ ಶಿರಾಡಿ, ಸಂಪಾಜೆಯಲ್ಲಿ ಮಾರ್ಗ ಕುಸಿತದಿಂದ ವಾಹನ ಸಂಚಾರಕ್ಕೆ ತಡೆಯಾಗಿರುವುದರಿಂದ ಹೆಚ್ಚಿನ ವಾಹನ ಸಂಚಾರ ಈ ರಸ್ತೆಯಲ್ಲಿ ಇರುವುದರಿಂದ ವಾಹನ ದಟ್ಟನೆ ಹಾಗೂ ಅತೀ ಹೆಚ್ಚು ಬಸ್ಸುಗಳು ಸಂಚಾರಿಸುವುದರಿಂದ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುವಂತಾಯಿತು.