ತಾಲೂಕಿನ ಅತ್ಯಂತ ಕ್ರಿಯಶೀಲ, ಶಿಸ್ತುಬದ್ಧ ಸಂಘ: ಹರೀಶ್ ಕಾರಿಂಜ: ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘ ವಾರ್ಷಿಕ ಮಹಾಸಭೆ

 

 

 

ಪಿಲಿಗೂಡು: ಜು.17: ಎರಡು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಹಾಯ ಮೊದಲಾದ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಕಣಿಯೂರು ಸಂಘ, ತಾಲೂಕಿನ ಎಲ್ಲಾ ಸಂಘಗಳಿಗೆ ಮಾದರಿ ಸಂಘವಾಗಿ ಬೆಳೆಯುತ್ತಿದೆ ಎಂದು ಮೂಲ್ಯರ ಯಾನೆ ಕುಂಬಾರರ ತಾಲೂಕು ಸಂಘದ ಅಧ್ಯಕ್ಷ ಹರೀಶ್ ಕಾರಿಂಜ‌ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಭಾನುವಾರ ಹಲೇಜಿಯ ರುಕ್ಮಯ ಹಲೇಜಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿದಾಗ ಸಮುದಾಯದ ಅಭಿವೃದ್ಧಿ ಸಾಧ್ಯ. ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2021-22 ನೇ ಸಾಲಿನ ಎಸ್.ಎಸ್. ಎಲ್.ಸಿ. ಮತ್ತು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. 2021-22ನೇ ಸಾಲಿನ ಲೆಕ್ಕಪತ್ರ ಮತ್ತು ವರದಿಯನ್ನು ವೇದಿತ ವಾಚಿಸಿದರು.
ಉಮೇಶ್ ಪಿಲಿಗೂಡು ಅಧ್ಯಕ್ಷತೆ
ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಯಶೋಧರ ಅಂತರ, ಯಶೋಧರ ಮಜಿಕುಡೆಲು, ಯುವವೇದಿಕೆ ಅಧ್ಯಕ್ಷ ಅಶೋಕ್ ಬರಂಬು ಉಪಸ್ಥಿತರಿದ್ದರು.
ಅಶೋಕ್ ಬರಂಬು ಸ್ವಾಗತಿಸಿ,
ಸೃಜನ್ ಪಿಲಿಗೂಡು ನಿರೂಪಿಸಿದರು. ನಿರೀಕ್ಷಾ ಎ. ವಂದಿಸಿದರು. ಶಾರ್ವರಿ ಪ್ರಾರ್ಥನೆ ನೆರವೇರಿಸಿದರು.

error: Content is protected !!