ಮಹಾರಾಷ್ಟ್ರ: ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆ ಇಂದು ರಾತ್ರಿ 7:30 ಗಂಟೆಗೆ ಪ್ರಮಾಣವಚನ ಸ್ವೀಕಾರ

 

 

ಮುಂಬಯಿ:ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ದೇವೇಂದ್ರ ಫಡ್ನವೀಸ್​ ಘೋಷಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ, ಅಚ್ಚರಿಯ ವಿಚಾರ ಪ್ರಕಟಿಸಿದರು.

ಇಂದು ರಾತ್ರಿ 7:30ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಮುಖ್ಯಮಂತ್ರಿಯಾಗಿ ಏಕನಾಥ್​ ಶಿಂಧೆ ಪ್ರಮಾಣ ವಚನ ಸ್ವೀಕರಿಸುವರು ಎಂದು ಅವರು ತಿಳಿಸಿದರು.”2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡಿದ್ದವು. ಜನರು ನಮಗೆ ಸರ್ಕಾರ ರಚಿಸಲು ಬೇಕಾದಷ್ಟು ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದರು. ಆದರೆ, ಶಿವಸೇನೆಯು ಕಾಂಗ್ರೆಸ್​, ಎನ್​​ಸಿಪಿ ಜೊತೆ ಮೈತ್ರಿ ಮಾಡಿಕೊಂಡಿತು. ಬಾಳಾಸಾಹೇಬ್​​ ತಮ್ಮ ಜೀವನದುದ್ದಕ್ಕೂ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದರೂ ಅವರೊಂದಿಗೆ ಶಿವಸೇನೆ ಕೈಜೋಡಿಸಿತು. ಹಿಂದುತ್ವವಾದಿ ಮತ್ತು ಸಾವರ್ಕರ್​ ಅವರ ವಿರುದ್ಧ ಇರುವವರೊಂದಿಗೆ ಸೇನೆ ಸೇರಿಕೊಂಡು, ಜನರ ಆದೇಶವನ್ನು ಅವಮಾನಿಸಿದರು” ಎಂದು ಫಡ್ನವೀಸ್ ತಿಳಿಸಿದರು.

error: Content is protected !!