ಬೆಳ್ತಂಗಡಿ: ಕಲ್ಲಗುಡ್ಡೆ ಬಳಿ ರಸ್ತೆ ಕುಸಿತ :ವಾಹನ ಸಂಚಾರ ಅಪಾಯ: ಅಪಾಯದ ಸ್ಥಿತಿಯಲ್ಲಿ ವಿದ್ಯುತ್ ಕಂಬ ತಕ್ಷಣ ದುರಸ್ತಿಗೊಳಿಸಲು ಸ್ಥಳೀಯರ ಮನವಿ

 

 

 

ಬೆಳ್ತಂಗಡಿ:ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಲ್ಲಗುಡ್ಡೆ ಎಂಬಲ್ಲಿ ರಸ್ತೆ ಕುಸಿದಿದ್ದು ಈ ರಸ್ತೆಯಲ್ಲಿ ಸಂಚಾರಿಸುವುದು ಅಪಾಯಕಾರಿಯಾಗಿದೆ. ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನಕ್ಕೆ ಹಾಗೂ ನೂರಾರು ಮನೆಗಳಿಗೆ ಈ ಸಂಪರ್ಕ ರಸ್ತೆಯ ಮೂಲಕವೇ ಹೋಗಬೇಕಾಗಿದೆ.

 

ಮಾರ್ಗ ಕುಸಿತಗೊಂಡ ಜಾಗದಲ್ಲಿ ವಿದ್ಯುತ್ ಕಂಬವೊಂದು ಇದ್ದು ಇದಕ್ಕೂ   ಅಪಾಯ ಆಗುವ ಸಂಭವ ಇದೆ. ಈಗಾಗಲೇ ಮಳೆ ಪ್ರಾರಂಭವಾಗಿದ್ದು ಸ್ಥಳೀಯರಿಗೆ ಸಮಸ್ಯೆಯಾಗಿದೆ. ರಸ್ತೆ ಕುಸಿದಿದ್ದು ಘನ ವಾಹನ ಹೋದರೆ ಪಲ್ಟಿಯಾಗುವ  ಸಂಭವ ಇದೆ.ದಯವಿಟ್ಟು ಯಾವುದೇ  ಲೋಡ್ ಗಾಡಿ ಚಲಾಯಿಸಬೇಡಿ   ಅದಲ್ಲದೇ ವಿದ್ಯುತ್ ಕಂಬವು ಬೀಳುವ  ಸಾಧ್ಯತೆ ಇದೆ. ಅದ್ದರಿಂದ ಲೋಡ್  ವಾಹನ ಸಂಚಾರ ನಿಷೇಧಿಸಿದೆ ಎನ್ನುವ ಎಚ್ಚರಿಕೆಯ ಸೂಚನಾ ಫಲಕವನ್ನು ಪಟ್ಟಣ ಪಂಚಾಯತ್ ಅಳವಡಿಸಿದೆ.

 

 

ದಿನಂಪ್ರತಿ ನೂರಾರು ವಾಹನ  ಓಡಾಡುವುದಲ್ಲದೇ ಕೃಷಿಕರು ಹೆಚ್ಚಾಗಿರುವ ಕಾರಣ ಕೃಷಿ ಚಟುವಟಿಕೆಗಳಿಗೆ ಘನ ವಾಹನ ಸಂಚಾರಕ್ಕೆ ಈ ರಸ್ತೆಯ ಅವಶ್ಯಕತೆ ಹೆಚ್ಚು ಇದೆ ಮಳೆ ಕೂಡ ಪ್ರಾರಂಭವಾಗಿರುವುದರಿಂದ ಕುಸಿತಗೊಂಡ ಈ ರಸ್ತೆಯಲ್ಲಿ ಲಘು ವಾಹನ ಸಂಚಾರವೂ ಅಪಾಯವೇ. ಕೈಪ್ಲೋಡಿಯಿಂದ ಪರ್ಯಾಯ ರಸ್ತೆ ಇದ್ದರೂ ಅದು ಮಣ್ಣಿನ ರಸ್ತೆಯಾಗಿರುವುದರಿಂದ ಈಗಾಗಲೇ ಸಂಪೂರ್ಣ ಹಾಳಾಗಿದೆ ಅದಲ್ಲದೇ ಘನ ವಾಹನ ಸಂಚಾರಕ್ಕೆ ರಸ್ತೆ ಕಿರಿದಾಗಿದ್ದು ಅದರಲ್ಲಿ ವಾಹನ ಸಂಚಾರ ಕಷ್ಟಸಾಧ್ಯವಾಗಿದೆ.

 

 

 

ಅದ್ದರಿಂದ ಈ ಬಗ್ಗೆ ಪಟ್ಟಣ ಪಂಚಾಯತ್ ತಕ್ಷಣ ಕ್ರಮ ಕೈಗೊಂಡು ದುರಸ್ತಿಗೊಳಿಸಬೇಕಾಗಿ ಸ್ಥಳೀಯರು ಮನವಿ ಮಾಡುತಿದ್ದಾರೆ.

error: Content is protected !!