ಇನ್ನಷ್ಟು ಉದ್ಯೋಗಗಳ ಮೂಲಕ ನವ ಬೆಳ್ತಂಗಡಿ ನಿರ್ಮಾಣಕ್ಕೆ ಶಕ್ತಿ ತುಂಬಲಿ: ಶಾಸಕ ಹರೀಶ್ ಪೂಂಜ ಶಶಿಧರ್ ಶೆಟ್ಟಿಯವರ ಸರಳ ವ್ಯಕ್ತಿತ್ವವೇ ಅವರನ್ನು ಉನ್ನತ ಮಟ್ಟಕ್ಕೇರಿಸಿದೆ: ಶಾಸಕ ಉಮಾನಾಥ ಕೋಟ್ಯಾನ್ ಗುರುವಾಯನಕೆರೆ ನವಶಕ್ತಿ ರೆಸಿಡೆನ್ಸಿ ಉದ್ಘಾಟನಾ ಕಾರ್ಯಕ್ರಮ

 

 

 

ಬೆಳ್ತಂಗಡಿ: ಸಾವಿರಾರು ಯುವಕರಿಗೆ ಉದ್ಯೋಗಗಳನ್ನು ನೀಡಿ ಪ್ರೇರಣೆಯಾದ ಶಶಿಧರ್ ಶೆಟ್ಟಿಯವರು ತನ್ನ ಹುಟ್ಟೂರು ಅಭಿವೃದ್ಧಿ ಹೊಂದಬೇಕು ತನ್ನೂರಿನ ಒಂದಷ್ಟು ಯುವಕರಿಗೆ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಉದ್ಯಮವನ್ನು ಪ್ರಾರಂಭಿಸಿ ತಾಲೂಕಿನ ಅಭಿವೃದ್ದಿಗೆ ಪೂರಕವಾದ ಕೆಲಸಗಳಿಗೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

 

ಅವರು ಗುರುವಾಯನಕೆರೆ ನವಶಕ್ತಿ ರೆಸಿಡೆನ್ಸಿ ಉದ್ಘಾಟಿಸಿ ಮಾತನಾಡಿದರು.‌ಪ್ರಪಂಚದಾದ್ಯಂತ ಬೆಂಗಳೂರಿನ ಹೆಸರು ಪ್ರಸಿದ್ಧಿಯನ್ನು ಪಡೆದಿದೆ ಅದರ ನಿರ್ಮಾತೃ ನಾಡ ಪ್ರಭು ಕೆಂಪೇಗೌಡ ಅವರ ಜಯಂತಿಯ ಈ ಶುಭ ದಿನದಂದು ನವಶಕ್ತಿ ರೆಸಿಡೆನ್ಸಿ ಉದ್ಘಾಟನೆ ಗೊಂಡಿದೆ. ಅದ್ದರಿಂದ ಅದೂ ಕೂಡ ನವ ಬೆಳ್ತಂಗಡಿಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿ ತಾಲೂಕಿನ ಇನ್ನಷ್ಟು ಯುವಕರಿಗೆ ಉದ್ಯೋಗ ನೀಡುವ ಮೂಲಕ ಮಾದರಿಯಾಗಲಿ ಎಂದರು.

 

 

ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಈಗಿನ ಕಾಲದಲ್ಲಿ ಹಣ ಮಾಡುವುದು ಕಷ್ಟವೇನಲ್ಲ ಶ್ರಮ ವಹಿಸಿ ಪ್ರಯತ್ನ ಪಟ್ಟರೆ ಹಣದ ಮೂಲಕ ಶ್ರೀಮಂತನಾಗಬಹುದು. ಅದರೆ ಶ್ರೀಮಂತನಾದ ಮೇಲೆ ಆ ವ್ಯಕ್ತಿ ಸಮಾಜದಲ್ಲಿ ಹೇಗಿರುತ್ತಾನೆ ಎಂಬುವುದು ಮುಖ್ಯವಾಗಿರುತ್ತದೆ. ಅದಕ್ಕೆಲ್ಲ ಮಾದರಿ ಶಶಿಧರ್ ಶೆಟ್ಟಿ ಹಾಗೂ ಅವರ ಕುಟುಂಬದವರಾಗಿದ್ದಾರೆ. ತಾನು ಬೆಳೆದು ಬಂದ್ದ ದಾರಿಯನ್ನು ಯಾವತ್ತೂ ಮರೆಯದೇ ತನ್ನ ಸರಳತೆಯ ಮೂಲಕ ತಾನೊಬ್ಬ ದೊಡ್ಡ ಉದ್ಯಮಿಯೆಂದು ಎಲ್ಲೂ ತೋರಿಸಿಕೊಳ್ಳದೇ ಎಲ್ಲರಲ್ಲಿಯೂ ನಗುನಗುತ್ತ ಮಾತನಾಡುವ ಅವರ ಸರಳ ಗುಣ ವ್ಯಕ್ತಿತ್ವವೇ ಇವತ್ತು ಅವರನ್ನು ಇಷ್ಟು ದೊಡ್ಡವನನ್ನಾಗಿಸಿದೆ.

 

 

ಸಾವಿರಾರು ಉದ್ಯೋಗಿಗಳಿಗೆ ಅನ್ನದಾತರಾಗಿರುವುದಲ್ಲದೇ ಸಮಾಜಮುಖಿ ಕಾರ್ಯಗಳ ಮೂಲಕ ಅನೇಕ ಸೇವಾ ಕಾರ್ಯಗಳನ್ನು ವಿವಿಧ ರೀತಿಯಲ್ಲಿ ಮಾಡಿಕೊಂಡು ಬರುತ್ತಿರುವ ಶಶಿಧರ್ ಶೆಟ್ಟಿಯವರು ಇತರರಿಗೆ ಮಾದರಿಯಾಗಿದ್ದಾರೆ. ಅವರು ಬೆಳ್ತಂಗಡಿಯಲ್ಲಿ ಪ್ರಾರಂಭಿಸುತ್ತಿರುವ ಉದ್ಯಮವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ಇಲ್ಲಿಯೂ ಸಾವಿರಾರು ಯುವಕರಿಗೆ ಉದ್ಯೋಗ ಸಿಗುವ ಮೂಲಕ ಉದ್ಯಮವು ಅಭಿವೃದ್ಧಿ ಹೊಂದಲಿ ಎಂದರು.

 

 

 

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಶುಭ ಹಾರೈಸಿದರು. ಪಟ್ಲ ಪೌಂಡೇಷನ್ ನ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಶಿ ಶೆಟ್ಟಿ ನವಶಕ್ತಿ , ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ , ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯಚಂದ್ರ ಶೆಟ್ಟಿ,ಉಪಸ್ಥಿತರಿದ್ದರು. ಶಶಿಧರ್ ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿದ್ದ ಗಣ್ಯರಿಗೆ ರಾಜೇಶ್ ಶೆಟ್ಟಿ ನವಶಕ್ತಿ ಸೇರಿದಂತೆ ಕುಟುಂಬಿಕರು ಸ್ಮರಣಿಕೆ ನೀಡಿ ಗೌರವಿಸಿದರು.ಪ್ರಕಾಶ್ ಶೆಟ್ಟಿ ನೊಚ್ಛ ಕಾರ್ಯಕ್ರಮ ನಿರೂಪಿಸಿದರು ಸಂತೋಷ್ ಶೆಟ್ಟಿ ಉಪ್ಪಡ್ಕ ಧನ್ಯವಾದವಿತ್ತರು.
ಆನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

error: Content is protected !!