ಧರ್ಮಸ್ಥಳ : ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ಮರಕ್ಕೆ ಬೈಕ್ ಡಿಕ್ಕಿ ಬೈಕ್‌ನಲ್ಲಿದ್ದ ಹೊಟೇಲ್ ಮಾಲಕ ಸ್ಥಳದಲ್ಲೇ ಸಾವು

 

 

 

 

 

ಬೆಳ್ತಂಗಡಿ : ಬೆಳಗ್ಗಿನ ಜಾವ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹೊಟೇಲ್ ಮಾಲಕ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯ ಅಡ್ಯಾಲ ಚಡವು ಎಂಬಲ್ಲಿ ಬೆಳಗ್ಗಿನ ಜಾವ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು ಇದನ್ನು ಗಮನಿಸದ ಬೈಕ್ ಸವಾರ ಬೆಳಗ್ಗೆ ಸುಮಾರು 5:30 ರ ವೇಳೆಗೆ ತಮ್ಮ ಹೊಟೇಲ್ ಗೆ ಹೋಗುವಾಗ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಬೈಕ್ ಸವಾರ ಕನ್ಯಾಡಿ ಬಳಿ ಇರುವ ಹೊಟೇಲ್ ಮಾಲಕ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಮುಗುಳಿಚತ್ರ ನಿವಾಸಿ ನೇಮಿರಾಜ್ ಬುಣ್ಣು ಅವರ ಮಗ ವಸಂತ್ ಕುಮಾರ್ ಜೈನ್ (42) ಎಂದು ತಿಳಿದುಬಂದಿದ್ದೆ. ವಸಂತ ಕುಮಾರ್ ಜೈನ್ ಅವರು ಧರ್ಮಸ್ಥಳ ಕ್ಷೇತ್ರದಲ್ಲಿ ಕೆಲಸದಲ್ಲಿದ್ದು ಅಲ್ಲಿ ಬಿಟ್ಟು ನಂತರ ಕೆಲಸಮಯದ ಹಿಂದೆ ಕನ್ಯಾಡಿ ಬಳಿ ಸ್ವಂತ ಹೊಟೇಲ್ ಉದ್ಯಮಿ ಆರಂಭಿಸಿದ್ದರು.

ಅಪಾಘಾತದ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು   ಪೊಲೀಸರು ಮಹಜರು ನಡೆಸಿ ಆಂಬುಲೆನ್ಸ್  ಮೂಲಕ  ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

 

 

error: Content is protected !!