ಬೆಳ್ತಂಗಡಿಯ ಸಾತ್ವಿಕ್ ಕುಳಮರ್ವ ಲೆಫ್ಟಿನೆಂಟ್ ಹುದ್ದೆಗೆ ನೇಮಕ

 

ಬೆಳ್ತಂಗಡಿ:ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಕಳೆದ ಒಂದು ವರ್ಷದಿಂದ ಕಠಿಣ ತರಬೇತಿ ಪಡೆಯುತ್ತಿರುವ ಬೆಳ್ತಂಗಡಿಯ ಹೆಮ್ಮೆಯ ಸಾತ್ವಿಕ್ ಕುಳಮರ್ವ ಅವರು  ಭಾರತೀಯ ಸೇನಾಪಡೆಯ ತಾಂತ್ರಿಕ ವಿಭಾಗದ ಲೆಪ್ಟಿನೆಂಟ್ ಹುದ್ದೆಗೆ ನೇಮಕಗೊಂಡರು. ಶುಕ್ರವಾರ ಡೆಹ್ರಾಡೂನ್ ನಲ್ಲಿ ನಡೆದ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಡೇ ಪರೇಡ್ ನಲ್ಲಿ ಪಾಲ್ಕೊಂಡ 288 ಯುವ ಯೋಧರಲ್ಲಿ ಸಾತ್ವಿಕ್ ಕುಳಮರ್ವ ಅವರೂ ಒಬ್ಬರು. ಪಾಸಿಂಗ್ ಔಟ್ ಡೇ ಪರೇಡ್ ಬಳಿಕ ಹೊಸದಾಗಿ ನೇಮಕಗೊಂಡಿರುವ ಎಲ್ಲ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು ಜಮ್ಮುವಿನ ಸಾತ್ವಾರಿಯಲ್ಲಿ ಸಾತ್ವಿಕ್ ಕುಳಮರ್ವ ಅವರು 26 ಐಡಿಎಸ್ ಆರ್ (ಇನ್ ಫೆಂಟ್ರಿ ಡಿವಿಶನ್ ಸಿಗ್ನಲ್ಸ್ ರೆಜಿಮೆಂಟ್)ನಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನಿಯೋಜನೆಗೊಂಡಿದ್ದಾರೆ.ಎಲ್ಲ ಕೆಡೆಟ್ ಗಳಿಗೆ 3 ವಾರಗಳ ವಿಶ್ರಾಂತಿ ನೀಡಲಾಗಿದ್ದು ಆ ಬಳಿಕ ನಿಯೋಜಿತ ಸ್ಥಳಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.ಪಾಸಿಂಗ್ ಔಟ್ ಪರೇಡ್ ನಲ್ಲಿ ಪಾಲ್ಗೊಳ್ಳಲು ಎಲ್ಲ ಯೋಧರ ಹೆತ್ತವರು ಮತ್ತು ಕುಟುಂಬದ ಸದಸ್ಯರಿಗೆ ಅವಕಾಶ ನೀಡಲಾಗಿತ್ತು. ದೇಶ ಸೇವೆಗಾಗಿ ತಮ್ಮ ಮಕ್ಕಳು ಜೀವನವನ್ನು ಮುಡಿಪಾಗಿಟ್ಟ ಆ ಕ್ಷಣ ಎಲ್ಲ ಹೆತ್ತವರಿಗೆ ಹೃದಯಸ್ಪರ್ಶಿ ಯಾಗಿತ್ತು.ಸಾತ್ವಿಕ್ ಕುಳಮರ್ವ ಅವರು ಬೆಳ್ತಂಗಡಿ ತಾಲೂಕಿನ ನಿವೃತ್ತ ಪ್ರಾಂಶುಪಾಲ ಪ್ರೋ ಗಣಪತಿ ಭಟ್ ಕುಳಮರ್ವ ಹಾಗೂ ಕಾಲೇಜು ಉಪನ್ಯಾಸಕಿ ಪಿ. ವಸಂತಿ ಇವರ ಪುತ್ರನಾಗಿದ್ದಾರೆ.

error: Content is protected !!