ರೋಟರಿ ಕ್ಲಬ್ ಬೆಳ್ತಂಗಡಿ ಸಾಧನೆಗೆ ಪ್ಲಾಟಿನಂ ಪ್ರಶಸ್ತಿ ಸೇರಿ ಹಲವಾರು ಪುರಸ್ಕಾರಗಳು

 

 

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಗೆ 2021-22 ನೇ ಸಾಲಿನ ಪ್ಲಾಟಿನಂ ಪ್ರಶಸ್ತಿ ದೊರೆತಿದೆ

ಮೈಸೂರಿನ ಸ್ಪೋರ್ಟ್ಸ್ ಕ್ಲಬ್ ನಲ್ಲಿ  ಇ‌ತ್ತೀಚೆಗೆ ನಡೆದ ಅವಾರ್ಡ್ ನೈಟ್ಸ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದರ ಜೊತೆಯಲ್ಲಿ ರೋಟರಿ ಇಂಡಿಯಾ ದಲ್ಲಿ ತನ್ನ ಕಾರ್ಯಕ್ರಮಗಳನ್ನು ದಾಖಲೀಕರಣಗೊಳಿಸುವಲ್ಲಿ ಮೊದಲ ಸ್ಥಾನ, ಮಧುಮೇಹ ನಿವಾರಣಾ ಕಾರ್ಯಕ್ರಮಗಳಿಗಾಗಿ ವಿಶೇಷ ಪ್ರಶಸ್ತಿ, ಪೋಲಿಯೋ ನಿರ್ಮೂಲನೆ ಗಾಗಿ ಕೈಗೊಂಡ ಕಾರ್ಯಗಳಿಗಾಗಿ ಪ್ರಶಸ್ತಿ, ರೋಟರಿ ಪಬ್ಲಿಕ್ ಇಮೇಜ್ ಡ್ರೈವ್ ಗಾಗಿ ಪ್ರಶಸ್ತಿ, ಹಾಗೂ ರೋಟರಿ ಎಥಿಕ್ಸ್ ಜಿಲ್ಲಾ ಸೆಮಿನಾರ್ ನ್ನು ಆಯೋಜಿಸಿದಕ್ಕಾಗಿ ವಿಶೇಷ ಪ್ರಶಸ್ತಿ ಹಾಗೂ ಹಾಗೂ ಜಿಲ್ಲಾ ಎಥಿಕ್ಸ್ ಕಮಿಟಿ ಚೇರ್ ಮಾನ್ ರೊ.ಎಂ.ವಿ.ಭಟ್ ಅವರಿಗೆ ವಿಶೇಷ ಅಭಿನಂದನಾ ಪತ್ರ ಹೀಗೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ‌.  ರೋಟರಿ ಕ್ಲಬ್ ನ ಅಧ್ಯಕ್ಷ ರೊ. ಶರತ್ ಕೃಷ್ಣ ಪಡುವೆಟ್ನಾಯ, ಕಾರ್ಯದರ್ಶಿ, ರೊ.ಅಬ್ಬೂಬಕ್ಕರ್, ನಿಯೋಜಿತ ಅಧ್ಯಕ್ಷೆ  ಶ್ರೀಮತಿ ಮನೋರಮಾ ಭಟ್, ಪೂರ್ವಾಧ್ಯಕ್ಷರಾದ ರೊ.ಡಾ.ಶಶಿಧರ ಡೋಂಗ್ರೆ, ರೊ.ಜಯರಾಮ್, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರೊ. ಎಂ.ವಿ.ಭಟ್, ಹಾಗೂ ಪೂರ್ವ ಕಾರ್ಯದರ್ಶಿ ರೊ.ಪ್ರಕಾಶ್ ನಾರಾಯಣ ಅವರು ಭಾಗವಹಿಸಿ ಜಿಲ್ಲಾ ಗವರ್ನರ್ ರೊ.ರವೀಂದ್ರ ಭಟ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು

error: Content is protected !!