ಬೆಳ್ತಂಗಡಿ ತಾಲೂಕು ಆಸ್ಪತ್ರೆ ರಸ್ತೆಯಲ್ಲಿ ವಾಹನ ನಿಲುಗಡೆ ಅಂಬುಲೆನ್ಸ್ ಸೇರಿದಂತೆ ಸಾರ್ವಜನಿಕರಿಗೆ ನಿತ್ಯ ಕಿರಿ ಕಿರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

 

 

ಬೆಳ್ತಂಗಡಿ: ತಾಲೂಕಿನ ಕೇಂದ್ರ ಸರ್ಕಾರಿ  ಆಸ್ಪತ್ರೆಯ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಅಡ್ಡದಿಡ್ಡಿಯಾಗಿ ನಿಲ್ಲುವುದರಿಂದ ತುರ್ತು ಸೇವೆಗಳಿಗೆ ಹಾಗೂ ಅಂಬುಲೆನ್ಸ್ ಸಂಚಾರಕ್ಕೆ  ಅಡಚಣೆ ಉಂಟಾಗುತ್ತಿದೆ ಎಂದು  ಸಾರ್ವಜನಿಕರೊಬ್ಬರು ಮಾಹಿತಿ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಅಂಗಡಿ, ಹೋಟೆಲ್  ಹಾಗೂ ಸಂತೆ ಮಾರುಕಟ್ಟೆಗೆ ಬರುವವರು ತಮ್ಮ ವಾಹನಗಳನ್ನು ರಸ್ತೆ ಬದಿ  ನಿಲ್ಲಿಸುವುದರಿಂದ ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ವಾಹನ ಚಾಲಕರು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ. ಎಂಬುವುದು ಸಾರ್ವಜನಿಕರ ಆರೋಪವಾಗಿದೆ.  ಪೋಲೀಸರು ಹಾಗೂ ನಗರ ಪಂಚಾಯತ್ ಅಧಿಕಾರಿಗಳು ಈ ಮೊದಲು ಇಲ್ಲಿ ವಾಹನ ನಿಲುಗಡೆ ನಿಷಿದ್ಧ   ಬೋರ್ಡ್ ಅಳವಡಿಸಿದ್ದರು. ಅದರೆ ಈ ಬಗ್ಗೆ ಕ್ಯಾರೆ ಅನ್ನದ ಕೆಲವರು ರಸ್ತೆಯ ಮಧ್ಯದಲ್ಲೇ ವಾಹನ ನಿಲ್ಲಿಸಿ ತುರ್ತು ವಾಹನ ಸಂಚಾರಕ್ಕೆ  ಅಡಚಣೆ ಉಂಟು ಮಾಡುವ ಕಾರ್ಯ ದಿನನಿತ್ಯ ನಡೆಯುತಿದೆ. ಅದರೂ ಪಟ್ಟಣ ಪಂಚಾಯತ್ ಅಧಿಕಾರಿಗಳು  ಹಾಗೂ  ಸಂಚಾರಿ ಪೋಲಿಸರು ಗಮನಹರಿಸುತ್ತಿಲ್ಲ ಈ ಬಗ್ಗೆ ದಯವಿಟ್ಟು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಆ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಹಾಗೂ ಸ್ಥಳೀಯ ಅಂಗಡಿ ಹೋಟೆಲ್ ಮಾಲಕರಿಗೆ ರಸ್ತೆಯಲ್ಲಿ  ವಾಹನ ನಿಲ್ಲಿಸದಂತೆ ತಮ್ಮ ಗ್ರಾಹಕರಿಗೆ ಮಾಹಿತಿ ನೀಡುವ ಬಗ್ಗೆ   ಎಚ್ಚರಿಕೆ ನೀಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

error: Content is protected !!