ವಾಹನ ಸವಾರರಿಗೆ ಶುಭ ಸುದ್ಧಿ ಪೆಟ್ರೋಲ್ 9.05 ರೂ ಡಿಸೇಲ್ 7 ರೂ ಅಬಕಾರಿ ಸುಂಕ ಕಡಿತ

 

ಬೆಂಗಳೂರು:ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪೆಟ್ರೋಲ್​ ಹಾಗೂ ತೈಲ ಬೆಲೆ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ, ಮಹತ್ವಪೂರ್ಣ ಘೋಷಣೆ ಹೊರಹಾಕಿದೆ. ಪೆಟ್ರೋಲ್ ಮೇಲೆ ಪ್ರತಿ ಲೀಟರ್​ಗೆ 9 ರೂಪಾಯಿ 5 ಪೈಸೆ ಹಾಗೂ ಡಿಸೇಲ್ ಮೇಲೆ 7 ರೂಪಾಯಿ ಇಳಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಗ್ರಾಹಕರಿಗೆ ರಿಲೀಫ್ ನೀಡಿದ್ದಾರೆ.

error: Content is protected !!